Select Your Language

Notifications

webdunia
webdunia
webdunia
webdunia

ಶಿಕ್ಷಣದಲ್ಲಿ ಸುಧಾರಣೆ ತರಲು ಸಮರ್ಥನಂನಿಂದ ಡಿಜಿಟಲೀಕರಣದ ಬಳಕೆ

ಶಿಕ್ಷಣದಲ್ಲಿ ಸುಧಾರಣೆ ತರಲು ಸಮರ್ಥನಂನಿಂದ ಡಿಜಿಟಲೀಕರಣದ ಬಳಕೆ
bangalore , ಮಂಗಳವಾರ, 7 ಸೆಪ್ಟಂಬರ್ 2021 (19:33 IST)
೧೯೯೭ರಲ್ಲಿ ಸ್ಥಾಪನೆಗೊಂಡ ಸಮರ್ಥನಂ ಸಂಸ್ಥೆ ತನ್ನ ಸೇವೆಗಾಗಿ ರಾಷ್ಟಿçÃಯ ಪುರಸ್ಕಾರ ಪಡೆದಿದ್ದು ವಿಕಲಚೇತನರು ಹಾಗೂ ಹಿಂದುಳಿದವರಿಗೆ ಜೀವನ ನಿರ್ವಹಣ ಕೌಶಲಗಳನ್ನು ಕಲಿಸುವುದರ ಜೊತೆಗೆ ಅವರ ಶಿಕ್ಷಣಕ್ಕೆ ಒತ್ತಾಸೆಯಾಗಿ ನಿಂತಿದೆ. ಶಿಕ್ಷಣದ ಸೌಲಭ್ಯಗಳಿಲ್ಲದ ಭಾರತದ ಹಲವು ಪ್ರದೇಶಗಳಿಗೆ ತಂತ್ರಜ್ಞಾನದ ಮೂಲಕ ಶಿಕ್ಷಣವನ್ನು ಒದಗಿಸುತ್ತಿದೆ. ಡಿಜಿಟಲೀಕರಣದ ಮೂಲಕ ಶಿಕ್ಷಣದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನಿರತವಾಗಿದೆ. 
    ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಇನಿಶಿಯೇಟಿವ್ ಆದ ಡಿ.ಎಕ್ಸ್ಸ್.ಸಿ ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ಸಮರ್ಥನಂ ಡಿಜಿಟಲ್ ಸಾಕ್ಷರತೆಯನ್ನು ಸರ್ಕಾರಿ ಶಾಲೆಯಲ್ಲಿ ಉತ್ತೇಜಿಸಲು ‘ಸ್ಮಾರ್ಟ್ ಕ್ಲಾಸ್‌ರೂಂ’ ಆರಂಭಿಸುತ್ತಿದ್ದು ಅದರ ಉದ್ಘಾಟನೆಯು ಸೆಪ್ಟೆಂಬರ್ ೭, ೨೦೨೧ ರಂದು ಎಚ್.ಎಸ್.ಆರ್ ಬಡಾವಣೆಯಲ್ಲಿರುವ ಸರ್ಕಾರಿ ಅಗರ ಇಲ್ಲಿ ಬೆಳಗ್ಗೆ ೯ ಗಂಟೆಗೆ ನಡೆಯಿತು. 
    ಶ್ರೀ ಬಿ.ಸಿ ನಾಗೇಶ್, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ, ಇವರು ಸಮಾರಂಭ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಶ್ರೀ ಓಂಕಾರ್ ಜಿ.ರಾವ್, ಡಿಎಕ್ಸ್ಸಿ ಟೆಕ್ನಾಲಜೀಸ್‌ನ ಸರ್ವಿಸ್ ಡೆಲಿವರಿ ನಿರ್ದೇಶಕರು,  ಬೊಮ್ಮನಹಳ್ಳಿ ವಿಧಾನಸಭಾ ಶಾಸಕರಾದ ಶ್ರೀ ಸತೀಶ್ ರೆಡ್ಡಿ,  ಶ್ರೀ ಎಸ್. ರಾಜೇಂದ್ರ, ಉಪ ನಿರ್ದೇಶಕರು, ಪಬ್ಲಿಕ್ ಇನ್ಸ್ಸ್ಟçಕ್ಷನ್ಸ್ ವಿಭಾಗ ಇವರುಗಳು ಭಾಗಿಯಾದರು. 
ಸಮರ್ಥನಂನ ಸಂಸ್ಥೆಯ ಸ್ಮಾರ್ಟ್ರೂಂಗಳು ಭಾರತದ ೮ ರಾಜ್ಯಗಳು ಹಾಗೂ ೧೨೫ ಶಾಲೆಗಳಲ್ಲಿ ವಿಸ್ತರಣ ಕಂಡಿದ್ದು ಡಿಎಕ್ಸ್À್ಸಸಿ ಟೆಕ್ನಾಲಜಿ ಸಂಸ್ಥೆ ತನ್ನ ಬೆಂಬಲ ಸೂಚಿಸಿ ಸಹಕರಿಸಿತು.
   ಶ್ರೀ ಬಿ.ಸಿ ನಾಗೇಶ್, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವರು ಮಾತನಾಡಿ ‘ಸರ್ಕಾರಿ ಶಾಲೆಗಳಲ್ಲಿ ಇಂಥ ಸ್ಮಾರ್ಟ್ ಕ್ಲಾಸ್‌ರೂಂಗಳು ಉದ್ಘಾಟನೆಯಾಗಿರುವುದು ತುಂಬ ಮಹತ್ವದ ಸಂಗತಿ. ಇದಕ್ಕೆ ಡಿಎಕ್ಸ್À್ಸಸಿ ತಂತ್ರಜ್ಞಾನ ಸಂಸ್ಥೆ ಸಹಯೋಗ ಕಲ್ಪಿಸುತ್ತಿರುವುದು ಸಂತೋಷದ.  ಶಿಕ್ಷಣ ಎಂದೂ ಮೌಲ್ಯಾಧಾರಿತವಾಗಿರಬೇಕು ಹಾಗೂ ಪಾವಿತ್ರö್ಯದಿಂದ ಕೂಡಿರಬೇಕು. ಮನುಷ್ಯರಲ್ಲಿರುವ ಶ್ರದ್ಧೆ, ಬದ್ಧತೆ ಹೊರತರಿಸುವುದೇ ಶಿಕ್ಷಣದ ಗುರಿ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಲಿ. ಹಾಗೇ ಕೋವಿಡ್ ಇನ್ನೂ ನಮ್ಮಿಂದ ಪೂರ್ಣವಾಗಿ ಮರೆಯಾಗಿಲ್ಲ. ಅದರ ಜೊತೆಯೇ ಬದುಕುವುದನ್ನು ರೂಢಿಸಿಕೊಳ್ಳಬೇಕು. ಶಾಲೆಗಳನ್ನು ಆರಂಭಿಸುವ ಬಗ್ಗೆ ಮಕ್ಕಳಲ್ಲಿ ಉತ್ಸಾಹವಿರುವುದು ಕಂಡುಬAದಿದೆ...’ ಎಂದರು.       
    ಸಮರ್ಥನಂ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ಟ್ರಸ್ಟಿ ಮಹಾಂತೇಶ್ ಜಿ ಕಿವಡಸಣ್ಣವರ್ ಮಾತನಾಡಿ ‘ ಡಿಜಿಟಲೀಕರಣ ಎನ್ನುವುದು ಶಿಕ್ಷಣವಲಯವನ್ನ ಪರಿಷ್ಕರÀಣೆಗೆ ಒಳಪಡಿಸಿದ್ದು ವರ್ಚುವಲ್ ತರಗತಿಗಳು, ಇ-ಪಠ್ಯಪುಸ್ತಕಗಳು,   ತಂತ್ರಜ್ಞಾನದ ಅಳವಡಿಕೆಯ ಕಲಿಕೆ ಮೂಲಕ ವಿದ್ಯಾರ್ಥಿಗಳು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ತರಗತಿಯಲ್ಲಿನ ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆ ತುಂಬ ಹಿತಕರವಾಗಿದ್ದು ಸಂವಾದದ ರೂಪ ಪಡೆದುಕೊಂಡಿದೆ. ಕಲಿಕೆಯನ್ನು  ಪರಿಣಾಮಕಾರಿಗೊಳಿಸಲು, ವಿದ್ಯಾರ್ಥಿಗಳು ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಡಿಎಕ್ಸ್ಸಿ ತಂತ್ರಜ್ಞಾನ ಸಂಸ್ಥೆ ಸಹಯೋಗ ಕೊಟ್ಟಿದೆ. ಅವರಿಗೆ ಧನ್ಯವಾದಗಳು’ ಎಂದರು.
 
   ಶಾಲೆಗಳಲ್ಲಿ ಮಕ್ಕಳಿಗೆ ಮುಂದುವರಿದ ಶಿಕ್ಷಣ ಸವಲತ್ತುಗಳನ್ನು ಒದಗಿಸಿಕೊಡಲು ಹಾಗೂ ಅವರುಗಳನ್ನು ತಂತ್ರಜ್ಞಾನದ ಕ್ಷೇತ್ರಕ್ಕೆ ಬೇಗ ಪರಿಚಯಿಸಲು ಈ ಕಾರ್ಯಕ್ರಮ ನೆರವು ನೀಡಲಿದೆ. ಡಿಜಿಟಲ್ ಸಾಕ್ಷರತೆ ಮೂಲಕ ಗುಣಮಟ್ಟದ ಶಿಕ್ಷಣವನ್ನು ಕುಗ್ರಾಮಗಳ ಹಾಗೂ ಹಳ್ಳಿಗಳಿಂದ ಬಂದು ನಗರಗಳಲ್ಲಿ ನೆಲೆಸಿದ ಮಕ್ಕಳಿಗೆ ನೆರವು ನೀಡುವುದು ಡಿ.ಎಕ್ಸ್.ಸಿ ತಂತ್ರಜ್ಞಾನ ಸಂಸ್ಥೆಯ ಮೂಲ ಉದ್ದೇಶ. ಈ ಮೂಲಕ ಸರ್ಕಾರಿ ಶಾಲಾ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ಹಾಗೂ ನೆರವು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ತಾಂತ್ರಿಕತೆಯ ಪ್ರಮಾಣ ಹೆಚ್ಚಿಸುವ ಗುರಿಯನ್ನು ಹೊಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಹಬ್ಬಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಬಿಎಂಪಿ