Select Your Language

Notifications

webdunia
webdunia
webdunia
webdunia

ಏರ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿದವರ ವಿರುದ್ಧ ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ

ಏರ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿದವರ ವಿರುದ್ಧ ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ
ಕಾರವಾರ , ಸೋಮವಾರ, 11 ಮಾರ್ಚ್ 2019 (06:38 IST)
ಕಾರವಾರ : ಏರ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿದವರ ವಿರುದ್ಧ ಮಾತನಾಡುವ ಭರದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.


ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕೂಗ್ತಿ ಮಹಾಸತಿ ದೇವಸ್ಥಾನದಲ್ಲಿ ನಡೆದ ತಾಯ್ನೆಲದ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಯೋಧರ ಶೌರ್ಯದ ಬಗ್ಗೆ ಸಂದೇಹ ಪಡುವ ಬಿಕನಾಸಿ ಪರಿಸ್ಥಿತಿ ಕಾಂಗ್ರೆಸ್‍ನಿಂದ ನಿರ್ಮಾಣವಾಗಿದೆ. ನಮ್ಮ ಪೈಲಟ್‍ಗಳು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಹತ್ಯೆ ಮಾಡಿದ್ದಕ್ಕೆ ಸಾಕ್ಷಿ ಕೇಳುತ್ತಿದ್ದಾರೆ. ಆದರೆ ಮುಸಲ್ಮಾನನ ಮಗ ಗಾಂಧಿ ಹೇಗಾದ ಎನ್ನುವುದಕ್ಕೆ ಸಾಕ್ಷಿ ಕೊಡುತ್ತಾರಾ ಎಂದು ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಮುಸಲ್ಮಾನ ಅಪ್ಪ, ಕ್ರಿಶ್ಚಿಯನ್ ತಾಯಿಗೆ ಹುಟ್ಟಿರುವ ಈ ಪರದೇಶಿ ಬ್ರಾಹ್ಮಣ ಹೇಗಾದ ಎನ್ನುವುದಕ್ಕೆ ಡಿಎನ್‍ಎ ಸಾಕ್ಷಿ ಕೊಡುತ್ತಾರಾ? ಮಾಜಿ ಪ್ರಧಾನಿ ರಾಜೀವ್ ಗಾಂಧಿ ಉಗ್ರರ ದಾಳಿಗೆ ಬಲಿಯಾದಾಗ ಅವರ ದೇಹ ಛಿದ್ರ ಛಿದ್ರವಾಗಿತ್ತು. ಮೃತ ದೇಹವನ್ನು ಪತ್ತೆ ಹಚ್ಚಲು, ಡಿಎನ್‍ಎ ಪರೀಕ್ಷೆಗೆ ಮಕ್ಕಳ ರಕ್ತದ ಮಾದರಿ ನೀಡುವಂತೆ ಸೋನಿಯಾ ಗಾಂಧಿ ಕೇಳಲಾಗಿತ್ತು. ಆದರೆ ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ರಕ್ತದ ಮಾದರಿ ಬೇಡ, ಪ್ರಿಯಾಂಕಾ ಗಾಂಧಿ ರಕ್ತವನ್ನು ತೆಗೆದುಕೊಳ್ಳಿ ಎಂದು ಹೇಳಿದ್ದರು. ಅಂತಹವರು ಈಗ ಏರ್ ಸ್ಟ್ರೈಕ್ ಸಾಕ್ಷಿ ಕೇಳುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮುಂದೆ ಆಡುತ್ತಿದ್ದ 9 ವರ್ಷದ ಬಾಲಕಿಗೆ ಪಕ್ಕದ ಮನೆಯ ಯುವಕ ಮಾಡಿದ್ದೇನು ಗೊತ್ತಾ?