Select Your Language

Notifications

webdunia
webdunia
webdunia
Wednesday, 9 April 2025
webdunia

ರಾಜಧಾನಿಯಲ್ಲಿ ರೌಡಿ ಗ್ಯಾಂಗ್‌ಗಳ ಅಂದರ್

ರಾಜಧಾನಿಯಲ್ಲಿ ಎರಡು ರೌಡಿ ಗ್ಯಾಂಗ್‌
bangalore , ಶನಿವಾರ, 23 ಅಕ್ಟೋಬರ್ 2021 (20:36 IST)
ಬೆಂಗಳೂರು: ರಾಜಧಾನಿಯಲ್ಲಿ ಎರಡು ರೌಡಿ ಗ್ಯಾಂಗ್‌ಗಳನ್ನು ಸಿಸಿಬಿ ಪೊಲೀಸರು ಅಂದರ್ ಮಾಡಿದ್ದಾರೆ.    
 
ರೌಡಿಸಂ ರಾಬರಿ ಮಾಡುತ್ತಿದ್ದ ಆರೋಪದ ಮೇಲೆ ಜೆ.ಜೆ.ನಗರದ ರೌಡಿಶೀಟರ್ ಇಮ್ರಾನ್ ಗ್ಯಾಂಗ್ ಮತ್ತು ವಿದ್ಯಾರಣ್ಯಪುರದ ರೌಡಿ ನಿಶಾಂತ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
 
ಇಮ್ರಾನ್ ಗ್ಯಾಂಗ್‌ನ ನವಾಜ್, ಇರ್ಷಾದ್, ಇಮ್ರಾನ್ ಪಾಷಾ, ಮಹಮದ್ ಅಫ್ತಾಬ್ ಬಂಧನಕ್ಕೊಳಗಾಗಿದ್ದು. ಆರೋಪಿಗಳು ಒಂಟಿಯಾಗಿ ತಿರುಗಾಡುವವರನ್ನು ಲಾಂಗ್ ಇಟ್ಟು ಹೆದರಿಸಿ ದರೋಡೆ ಮಾಡುತ್ತಿದ್ದರು. ಇಮಾನ್ 2020ರಲ್ಲಿ ನಡೆದಿದ್ದ ಪಾದರಾಯನಪುರ ಗಲಭೆಯ ಪ್ರಮುಖ ಅರೋಪಿಯಾಗಿದ್ದ. ಗಲಭೆ ಬಳಿಕ ತಲೆಮರಿಸಿಕೊಂಡಿದ್ದ. ನಂತರ ಅರೆಸ್ಟ್ ಮಾಡಲಾಗಿತ್ತು. ಆದರೆ ಬೇಲ್ ಪಡೆದು ಹೊರ ಬಂದು ಮತ್ತೆ ರೌಡಿಸಂ ಮಾಡುತ್ತಿದ್ದ ಎಂದು ಕೇಂದ್ರ  ಅಪರಾಧ ಪತ್ತೆ ದಳದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. 
 
ವಿದ್ಯಾರಣ್ಯಪುರದ ರೌಡಿ ನಿಶಾಂತ್ ಗ್ಯಾಂಗ್ ಕಟ್ಟಿದ್ದ. ಏರಿಯಾದಲ್ಲಿನ ಸಿವಿಲ್ ವಿಚಾರಗಳಿಗೆ ಕೈಹಾಕಿ, ಸೆಟಲ್ ಮೆಂಟ್ ಮಾಡುವ ಕೆಲಸ ಮಾಡುತ್ತಿದ್ದ. ನಿಶಾಂತ್ ಗ್ಯಾಂಗ್ ಸಹಚರರಾದ ಶರತ್, ಅಜಯ್, ಯತೀಶ್ ಎನ್ನುವವರನ್ನು ಸದ್ಯ ಬಂಧಿಸಲಾಗಿದೆ. ಸಿಸಿಬಿಯ ಒಸಿಡಬ್ಲೂ ವಿಭಾಗದ  ಅಧಿಕಾರಿಗಳು ಎರಡು ರೌಡಿಗ್ಯಾಂಗ್‌ನ ಅರೆಸ್ಟ್ ಮಾಡಿದ್ದಾರೆ ಎಂದು ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಸಾಗಿಸುತ್ತಿದ್ದ ಖತರ್ನಾಕ್ ಡ್ರಗ್ ಪೆಡ್ಲರ್ ನ ಕಹನಿ