Publish Date: Sun, 17 Sep 2023 (17:20 IST)
Updated Date: Sun, 17 Sep 2023 (16:21 IST)
ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಅಕ್ರಮವಾಗಿ ಕಲ್ಲು ಮತ್ತು ಮರಳು ಸಾಗಿಸುತಿದ್ದ ಎರಡು ಟಿಪ್ಪರ್ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನಾದ್ಯಂತ ವಿವಿಧ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆ PSI ಪ್ರವೀಣ್ ನೇತೃತ್ವದ ಸಿಬ್ಬಂದಿ ತಂಡ ಗಸ್ತು ತಿರುಗುತ್ತಿರುವಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತಿದ್ದ ಟಿಪ್ಪರ್ ಹಾಗೂ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ಮಿನಿ ಟಿಪ್ಪರ್ನ್ನ ವಶಕ್ಕೆ ಪಡೆದಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.