Webdunia - Bharat's app for daily news and videos

Install App

ನೌಕರರು ವಾಸವಿದ್ದ ಮೂರು ಅಂತಸ್ತಿನ ಕ್ವಾಟ್ರಸ್ ಕುಸಿತ

Webdunia
ಮಂಗಳವಾರ, 28 ಸೆಪ್ಟಂಬರ್ 2021 (19:28 IST)
ವಿಲ್ಸನ್ ಗಾರ್ಡನ್‍ನ ಲಕ್ಕಸಂದ್ರದಲ್ಲಿ  ಕುಸಿತಗೊಂಡಿರುವ ಮೂರು ಅಂತಸ್ತಿನ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಮುಗಿಯೊದರೊಳಗೆ ಕೋರಮಂಗಲದ ಕೆಎಂಎಫ್‍ನ ಬಮೂಲ್???(ಬೆಂಗಳೂರು ಮಿಲ್ಕï? ಫೆಡರೇಷನ್?) ಆವರಣದಲ್ಲಿರುವ ನೌಕರರು ವಾಸವಿದ್ದ ಮೂರು ಅಂತಸ್ತಿನ ಕ್ವಾಟ್ರಸ್ ಕುಸಿತಗೊಂಡು ನಾಲ್ವರು ಗಾಯಗೊಂಡಿದ್ದಾರೆ. ನಿವಾಸಿಗಳ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿಯಾಗದೆ ಭಾರಿ ದುರಂತವೊಂದು ತಪ್ಪಿದಂತಾಗಿದೆ. 
ಕಟ್ಟದೊಳಗೆ ವಾಸವಿದ್ದ ನಾಲ್ವರು ಹೊರಬರುವ ವೇಳೆ ಕಟ್ಟಡ ಕುಸಿದ ಪರಿಣಾಮ ಬಾಲಕೃಷ್ಣ (56), ಪೂರ್ಣಿಮಾ (40) 70 ವರ್ಷದ ವೃದ್ಧರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಇದರಲ್ಲಿ  ಪೂರ್ಣಿಮಾ ಸೇರಿ ಇಬ್ಬರಿಗೆ ಹೆಚ್ಚಿನ ಗಾಯವಾಗಿದ್ದು ಪೆÇೀರ್ಟಿಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. 
ಮೂರು ಹಂತಸ್ತಿನ 18 ಮನೆಗಳು ಕುಸಿತ:
ಕೆಎಂಎಫ್ ನೌಕರರು ಹಾಗೂ ಕಾರ್ಮಿಕರು ಭದ್ರತಾ ಸಿಬ್ಬಂದಿ ವಾಸಕ್ಕೆಂದು ಬಮೂಲ್???(ಬೆಂಗಳೂರು ಮಿಲ್ಕï? ಫೆಡರೇಷನ್?) ಆವರಣದಲ್ಲಿ ಈ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿತ್ತು. ಇದರಲ್ಲಿ 18 ಮನೆಗಳಿದ್ದವು. ಸುಮಾರು 50 ಮಂದಿ ವಾಸವಾಗಿದ್ದರು.
ಇವರಲ್ಲಿ ಬಹಳಷ್ಟು ಮಂದಿ ಮೊದಲನೇ ಪಾಳಿ ಕೆಲಸಕ್ಕೆ ತೆರಳಿದ್ದರು. ಉಳಿದವರಲ್ಲಿ ಕೆಲವರು ತಿಂಡಿ ಮಾಡಲೆಂದು ಹೊರ ಬಂದಿದ್ದರು. ಇನ್ನು ಕೆಲವರು ಮನೆಯಲ್ಲಿದ್ದ ವೇಳೆ ಕಟ್ಟಡದ ಒಂದು ಭಾಗ ಕುಸಿಯುವುದನ್ನು ನೋಡಿ ಹೊರಗಿದ್ದವರು ಕಿರುಚುಕೊಂಡಿದ್ದಾರೆ. ಇದನ್ನು ನೋಡಿ ಎಲ್ಲರು ಹೊರಗೆ ಓಡಿ ಬಂದಿದ್ದಾರೆ. ಹೀಗಾಗಿ, ಕ್ಷಣ ಮಾತ್ರದಲ್ಲಿ ಹತ್ತಾರು ಮಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ. 
ಒಂದೇ ಕರೆಗೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ:
ಕಟ್ಟಡ ಕುಸಿತದ ಕೆಲವೇ ನಿಮಿಷಗಳ ಹಿಂದೆ ಮನೆಯಲ್ಲಿದ್ದ ಎಲ್ಲರೂ ಆತಂಕದಿಂದ ಹೊರ ಬರುತ್ತಿದ್ದಂತೆ ಮೂರು ಅಂತಸ್ತಿನ ಕಟ್ಟಡದ ಒಂದು ಭಾಗ ಬಿದ್ದಿದೆ. ಕೂಡಲೇ ಮನೆಯವರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಆಡುಗೋಡಿ ಪೆÇಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 
ಬಮೂಲ್??? ನಿರ್ಲಕ್ಷ್ಯಕ್ಕೆ 50 ಜೀವಗಳಿಗೆ ಕುತ್ತಾಗಿತ್ತು:
ಬಮೂಲ್ ಸುಮಾರು 40 ವರ್ಷಗಳ ಹಿಂದೆ ಈ ಕ್ವಾಟ್ರಸ್ ನಿರ್ಮಿಸಿತ್ತು. ಇದರಲ್ಲಿ  18 ಮನೆಗಳಿದ್ದವು. ಕೆಎಂಎಫ್ ಹಾಗೂ ಬಮೂಲ್‍ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 50 ಮಂದಿಗಳು ವಾಸವಾಗಿದ್ದರು. ಹಳೇ ಕಟ್ಟಡವಾಗಿದ್ದರಿಂದ ಮಣ್ಣು ಉದುರುತ್ತಿತ್ತು. ಮಳೆ ಬಂದರೆ ನೀರು ಸುರಿಯುತ್ತಿತ್ತು. ಈ ಬಗ್ಗೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ? ಆಡಳಿತ ಮಂಡಳಿ ಗಮನಕ್ಕೆ ತಂದರೂ, ಯಾರೂ ಎಚ್ಚೆತ್ತುಕೊಂಡಿರಲಿಲ್ಲ ಎನ್ನಲಾಗಿದೆ.
ಬಮೂಲ್ ಅಧಿಕಾರಿಗಳು ನಿರ್ಲಕ್ಷ್ಯ?
ಹತ್ತಾರು ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳೆಲ್ಲವು ವಾಸಿಸಲು ಬೇರೆ ಕಟ್ಟಡ ನಿರ್ಮಿಸಿಕೊಡಿ ಎಂದು ಕೆಎಂಎಫ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಜೀವಕ್ಕೆ ಕುತ್ತು ತರುವ ಸನ್ನಿವೇಶವಿದೆ ಎಂದು ಹೇಳಿದರೂ ಯಾವುದೇ ತೊಂದರೆಯಾವುದಿಲ್ಲ ಎಂದು ಹೇಳಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. 
ಸಾಕು ಸ್ವಾನಗಳ ರಕ್ಷಣೆ:
ಸಂಪೂರ್ಣ ಕಟ್ಟಡ ಕುಸಿಯುವ ಮುನ್ನವೇ ಆತಂಕದಿಂದ ಎಲ್ಲರೂ ಮನೆಯಿಂದ ಹೊರ ಬಂದಿದ್ದಾರೆ. ಈ ವೇಳೆ ಎರಡು ಸಾಕು ನಾಯಿಗಳು ಮನೆಯಲ್ಲಿರುವುದನ್ನು ಗಮನಿಸಿದ ಅಗ್ನಿಶಾಮಕ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ.
ಅವಶೇಷಗಳಡಿ ಸಿಲುಕಿದ ಸಾಮಾಗ್ರಿಗಳು:
ಕಟ್ಟಡ ಕುಸಿತಗೊಂಡ ಕೂಡಲೇ ನಿವಾಸಿಗಳೆಲ್ಲ ಜೀವ ಉಳಿಸಿಕೊಳ್ಳುವ ಬರದಲ್ಲಿ ಬರಿಗೈನಲ್ಲಿ ಹೊರ ಬಂದಿದ್ದಾರೆ. ಹೀಗಾಗಿ, ನಿವಾಸಿಗಳ ಬಟ್ಟೆಗಳು, ಪಾತ್ರೆ ಪಗಡೆಗಳು, ಆಹಾರ ಸಾಮಾಗ್ರಿಗಳು, ಟಿವಿ, ಪ್ರಿಜ್  ಸೇರಿದಂತೆ ಇನ್ನಿತರ ವಸ್ತುಗಳು ಕಟ್ಟಡದಡಿ ಸಿಲುಕಿವೆ. 
 
ಬೆಳಗ್ಗೆ 9 ಗಂಟೆಗೆ ಕ್ವಾಟ್ರಸ್ ಖಾಲಿ ಮಾಡಲು ತಿಳಿಸಿದರು. ಆದರೆ, ಯಾವ ಕಾರಣಕ್ಕೆ ಖಾಲಿ ಮಾಡಬೇಕು ಎಂದು ಹೊರ ಹೋಗದೆ ಇದ್ದವು. ಈ ವೇಳೆ ಕುಸಿತಗೊಂಡ ಕೂಡಲೇ ಅಕ್ಕಪಕ್ಕದವರು ಕೂಗಿಕೊಂಡರು. ಆಪತ್ ಭಾಂದವರಂತೆ ಬಂದ ಹುಡುಗರು ನನ್ನನ್ನು ಕಾಪಾಡಿದರು. 
- ಶೃತಿ, ಕುಸಿದ ಕಟ್ಟಡದ ನಿವಾಸಿ
 
ಅಕ್ಕ ಪಕ್ಕದ ಕ್ವಾಟ್ರಸ್‍ಗಳಲ್ಲಿ ವಾಸಕ್ಕೆ ವ್ಯವಸ್ಥೆ:
ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದ ನೌಕರರಿಗೆ ಕೆಎಂಎಫ್ ಆಡಳಿತ ಮಂಡಳಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದೆ. ಕೆಎಂಎಫ್‍ಗೆ ಸೇರಿದ ಬೇರೆ ಬೇರೆ ಬ್ಲ್ಯಾಕ್‍ಗಳಲ್ಲಿ ಉಳಿದುಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. 
 
 
ನೌಕರರು, ಕಾರ್ಮಿಕರು ಉಳಿದುಕೊಳ್ಳಲು 18 ಮನೆಗಳುಳ್ಳ ಆರು ಕ್ವಾಟ್ರಸ್‍ಗಳನ್ನು (ಆರು ಬ್ಲಾಕ್‍ಗಳು) ಕೆಎಂಎಫ್ ನಿರ್ಮಿಸಿದೆ. ಆದರೆ, ಇವುಗಳಲ್ಲಿ ಜೆ ಬ್ಲಾಕ್ ಕಟ್ಟಡ ಕುಸಿದುಬಿದ್ದಿದೆ. ಇನ್ನು ಎಚ್ ಬ್ಲಾಕ್‍ನಲ್ಲಿ ವಾಸವಾಗಿರುವ ನಿವಾಸಿಗಳನ್ನು ತೆರವುಗೊಳಿಸಿದ್ದಾರೆ. ಉಳಿದ ನಾಲ್ಕು ಬ್ಲಾಕ್‍ಗಳ ಸ್ಥಿತಿಯೂ ಶಿಥಿಲವಸ್ಥೆಯಂತಿದೆ. ಹೀಗಾಗಿ, ಯಾವ ಕಟ್ಟಡ ಯಾವ ಸಮಯದಲ್ಲಿ ಧರೆಶಾಹಿಯಾಗುತ್ತದೆ ಎಂದು ಹೇಳಲಾಗದು. ನಿವಾಸಿಗಳೆಲ್ಲ ಜೀವದ ಬಿಗಿಹಿಡಿದು ಆತಂಕದಲ್ಲೇ ಬದುಕುತ್ತಿದ್ದಾರೆ. 
 
ಕಟ್ಟಡ ಕುಸಿತಗೊಂಡ ಬಳಿಕ ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ಕ್ವಾಟ್ರಸ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿ,  ಕುಸಿದಿರೋ ಕಟ್ಟಡದ ಜತೆಗೆ ಬಮೂಲ್ ಕ್ವಾಟ್ರಸ್ ಅಕ್ಕಪಕ್ಕದ ಕಟ್ಟಡಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲಾ ಕಟ್ಟಡಗಳ ನೆಲಸಮ? ಬಗ್ಗೆ ಚರ್ಚೆ ನಡೆಸುತ್ತೇವೆ. 6 ಬ್ಲಾಕ್‍ಗಳಲ್ಲಿರುವ 186 ಮನೆಗಳ ಪರಿಶೀಲನೆ ನಡೆಸಲಾಗುತ್ತೆ. ಆ ಬ್ಲಾಕ್ ಗಳಲ್ಲಿರೋ ಸಿಬ್ಬಂದಿಗೂ ಕಾಲಿ ಮಾಡಲು ಸೂಚನೆ ನೀಡಲಾಗುತ್ತದೆ. ಹಾಗೆ ಬೇರೆ ಕ್ವಾಟ್ರಸ್, ಅಪಾರ್ಟ್‍ಮೆಂಟ್‍ಗಳು ಸೇರಿದಂತೆ ಹಲವೆಡೆ ಸಿಬ್ಬಂದಿ ವಸತಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments