Select Your Language

Notifications

webdunia
webdunia
webdunia
webdunia

ತೆರಿಗೆ ಹೊರೆ ಶ್ರೀಮಂತರ ಮೇಲಲ್ಲ, ಬಡವರ ಮೇಲೆ ಬೀಳುತ್ತಿದೆ : ಕೃಷ್ಣಬೈರೇಗೌಡ

ತೆರಿಗೆ ಹೊರೆ ಶ್ರೀಮಂತರ ಮೇಲಲ್ಲ, ಬಡವರ ಮೇಲೆ ಬೀಳುತ್ತಿದೆ : ಕೃಷ್ಣಬೈರೇಗೌಡ
ಬೆಂಗಳೂರು , ಗುರುವಾರ, 17 ಮಾರ್ಚ್ 2022 (17:12 IST)
ಬೆಂಗಳೂರು : ತೆರಿಗೆ ಹೊರೆ ಶ್ರೀಮಂತರ ಮೇಲಲ್ಲ, ಬಡವರ ಮೇಲೆ ಬೀಳುತ್ತಿದೆ ಎಂದು ಕೇಂದ್ರ ಸರ್ಕಾರದ ತೆರಿಗೆ ನೀತಿ ವಿರುದ್ಧ ಶಾಸಕ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಜಿಎಸ್ಟಿ ಪರಿಹಾರ ನಿಂತರೂ ತೆರಿಗೆ ಹಾಕುವುದು ಮುಂದುವರಿಯಲಿದೆ.

ತಂಬಾಕು ವಸ್ತುಗಳ ಮೇಲೆ ಸಿನ್ ಗೂಡ್ಸ್ ಸೆಸ್ ಹಾಕುತ್ತಾರೆ. ಅದನ್ನು ಹಿಂದಕ್ಕೆ ಪಡೆಯಲು ಆಗುವುದಿಲ್ಲ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಜಿಎಸ್ಟಿ ಪರಿಹಾರ ಕೊಡುವುದಕ್ಕಾಗಿಯೇ ಸೆಸ್ ಹಾಕಲಾಗುತ್ತಿದೆ. ಪರಿಹಾರ ಕೊಡುವುದು ನಿಂತರೆ ಸೆಸ್ ಕೂಡ ನಿಲ್ಲಲಿದೆ ಎಂದು ಸಿಎಂ ಹೇಳುತ್ತಾರೆ. ಆದರೆ ವಾಸ್ತವವಾಗಿ ಜಿಎಸ್ಟಿ ಪರಿಹಾರ ನಿಂತರೂ ಸೆಸ್ ಮುಂದುವರಿಯುತ್ತದೆ.

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಜಿಎಸ್ಟಿ ಪರಿಹಾರವನ್ನು ಮುಂದುವರಿಸಲು ಪತ್ರ ಬರೆದಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಜಿಎಸ್ಟಿ ಪರಿಹಾರ ಮುಂದುವರಿಸುವುದು ಅನುಮಾನವಾಗಿದೆ. ಕೇಂದ್ರದಿಂದ ತಮಗೆ ಬರುವ ಸಹಾಯಾನುದಾನ ಕಡಿಮೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿರಸಿಯ ಜಾತ್ರೆಯಲ್ಲಿ ಪೊಲೀಪನ್ನ ವಿಶೇಷ ಹರಕೆ