Select Your Language

Notifications

webdunia
webdunia
webdunia
Saturday, 12 April 2025
webdunia

ಪಿಯು ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳ ಪಟ್ಟು

The students' fold to postpone the PU exam
bangalore , ಮಂಗಳವಾರ, 7 ಡಿಸೆಂಬರ್ 2021 (19:47 IST)
ರಾಜ್ಯದಲ್ಲಿ ಓಮಿಕ್ರೋನ್ ವೈರಸ್ ಆತಂಕ ಹೆಚ್ಚಾಗಿದ್ದು , ನಗರದ ಕಾಲೇಜುಗಳಲ್ಲಿ ಸೋಂಕು ಉಲ್ಬಣಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದು, ಪಿಯು ಪರೀಕ್ಷೆಗಳನ್ನ ಮುಂದೂಡುವಂತೆ ಪಟ್ಟು ಹಿಡಿದಿದ್ದಾರೆ.  ನಗರದ ಆರ್ ವಿ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜ್ ಸೇರಿದಂತೆ ಬಹುತೇಕ ಕಾಲೇಜುಗಳ ವಿದ್ಯಾರ್ಥಿಗಳು ಪಿಯು ಬೋರ್ಡ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ  ಸರ್ಕಾರದ ವಿರುದ್ಧ ವ್ಯಾಪಕ  ಆಕ್ರೋಶ ಹೊರಹಾಕಿದ್ದಾರೆ. ನಮ್ಮಗೂ ಓಮಿಕ್ರೋನ್ ಆತಂಕ ಇದೆ, ನಮ್ಮಗೆ ಈ ಸಮಯದಲ್ಲಿ  ಪರೀಕ್ಷೆ ಬೇಡ .. ಜೀವ ಇದ್ರೆ ತಾನೇ ಜೀವನ . ಕಾಲೇಜಿನಲ್ಲಿ ಕೊರೋನಾ ಕೇಸ್ ಗಳಿವೆ. ಫಸ್ಟ್ ಪಿಯು ಎಕ್ಸಾಂ ಬೇಡ , ನಮ್ಮಗೆ ಇನ್ನೂ ವ್ಯಾಕ್ಸಿನ್ ಆಗಿಲ್ಲ . ಆನ್ ಲೈನ್ ಕ್ಲಾಸ್ ಮಾಡಿ ಆಫ್ ಲೈನ್ ಕ್ಲಾಸ್ ಬೇಡ ಅಂತಾ ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಪಿಯು ಬೋರ್ಡ್ ಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇನ್ನೂ ಅಧಿಕಾರಿಗಳು  ವಿದ್ಯಾರ್ಥಿಗಳಿಗೆ ಸ್ಪಂದಿಸಿ ಪರೀಕ್ಷೆ ಮುಂದೂಡದೇ ಇದ್ರೆ ವಿದ್ಯಾರ್ಥಿಗಳು ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಹಣದ ದಾಹಕ್ಕೆ ಗಂಡನೇ ಪತ್ನಿಯನ್ನು ಕೊಲೆಗೈದಿರುವ ಘಟನೆ