ಬೆಂಗಳೂರು : ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಸುಧಾಕರ್, ರಮೇಶ್ ಕುಮಾರ್ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕೆ ರಮೇಶ್ ಕುಮಾರ್ ವಿರುದ್ಧ ಸಚಿವ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಈಶ್ವರಪ್ಪ ಅವರಿಗೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ಅಲ್ಲದೇ ರಮೇಶ್ ಕುಮಾರ್ ಅಮಾನತು ಮಾಡುವಂತೆ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಒತ್ತಾಯ ಮಾಡಿದ್ದಾರೆ.
ಹಾಗೇ ಕಾಂಗ್ರೆಸ್ ನಾಯಕರಿಂದ ಹಕ್ಕುಚ್ಯುತಿ ವಿಚಾರ ಪ್ರಸ್ತಾಪ ಮಾಡಿದ ಹಿನ್ನಲೆಯಲ್ಲಿ ಎರಡೂ ಕಡೆಯ ಹಕ್ಕುಚ್ಯುತಿ ನೋಟಿಸ್ ನನಗೆ ತಲುಪಿದೆ. ಪ್ರಶ್ನೋತ್ತರದ ನಂತರ ಹಕ್ಕುಚ್ಯುತಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಹೇಳಿದ್ದರೂ ಕೂಡ ಸದನದಲ್ಲಿ ನಿಲ್ಲದ ಗದ್ದಲ, ಕೋಲಾಹಲ, ಹೀಗಾಗಿ ಕಲಾಪವನ್ನು 15 ನಿಮಿಷ ಸ್ಪೀಕರ್ ಮುಂದೂಡಿದ್ದಾರೆ.