ಬೆಂಗಳೂರು: ಭಾರೀ ಸಂಚಲಕ್ಕೆ ಕಾರಣವಾಗಿದ್ದ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರನ ಗಲಾಟೆ ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ವಜ್ಜಲ್ ಪುತ್ರ ಪ್ರತಿದೂರು ದಾಖಲಿಸಿದ್ದಾರೆ.
ಇತ್ತ ಪೊಲೀಸರ ತನಿಖೆಯಲ್ಲಿ ಮಾನಪ್ಪ ವಜ್ಜಲ್ ಪುತ್ರನ ಬಗ್ಗೆ ಅನುಮಾನ ಮೂಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.
ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಕ್ರಮ್ ರೈ ಎಂಬುವರು ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ವಿಕ್ರಮ್ ರೈ, ಸೆ.12ರ ರಾತ್ರಿ 10ರ ಸುಮಾರಿಗೆ ಸ್ನೇಹಿತನನ್ನ ಡ್ರಾಪ್ ಮಾಡಲು ಎಂಬಸಿ ಹ್ಯಾಬಿಟೇಟ್ ಅಪಾರ್ಟ್ ಮೆಂಟ್ ಬಳಿ ಬಂದಿದ್ದರು. ಈ ಹಿಂದೆ ಆಂಜಿನಪ್ಪ ವಜ್ಜಲ್ ಎರಡು ಬಾರಿ ಪಾರ್ಕಿಂಗ್ ವಿಚಾರಕ್ಕೆ ವಿಕ್ರಮ್ ರೈ ಜತೆ ಕಿರಿಕ್ ಮಾಡಿಕೊಂಡಿದ್ದರಂತೆ. ಅದೇ ರೀತಿ ಸೆ.12ರಂದು ಕೂಡ ಆಂಜಿನಪ್ಪ ವಜ್ಜಲ್ ತನ್ನ ಆಪ್ತ ಮೌನೀಶ್ ಸೇರಿ 10 ಹುಡುಗರ ಜತೆ ಗಲಾಟೆ ಶುರು ಮಾಡಿದ್ದರಂತೆ. ಬಳಿಕ ಪಂಚ್ ಮಾಡುವ ಆಯುಧದಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಈ ಬಗ್ಗೆ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜಿನಪ್ಪ ವಜ್ಜಲ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇತ್ತ ಆಂಜಿನಪ್ಪ ವಜ್ಜಲ್ ಪ್ರತಿದೂರು ದಾಖಲಿಸಿದ್ದಾರೆ.