ಮೂರನೇ ತಪ್ಪಲಿಲ್ಲ ದಿನವೂ ಸರ್ವರ್ ಕಾಟ

Webdunia
ಶನಿವಾರ, 22 ಜುಲೈ 2023 (19:02 IST)
ಬಹು ನಿರೀಕ್ಷೆಯಿಂದ ಕಾಯ್ತಿದ್ದ ಗೃಹಲಕ್ಷ್ಮೀ ಯೋಜನೆಗೂ ಈಗ ಸಮಸ್ಯೆ ಎದುರಾಗಿದೆ. ಗೃಹಲಕ್ಷ್ಮೀಗೆ ಯಾವುದೇ ತೊಡಕಾಗಬಾರದೆಂದು ಕೊಂಚ ಲೇಟಾಗಿ ಚಾಲನೆ ನೀಡಲಾಗುತ್ತಿದ್ದು, ಪ್ರತ್ಯೇಕ ಅಪ್ ರೆಡಿ ಮಾಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾಯ್ತಾ ಇದ್ರೂ. ಕೊನೆಗೂ ಅರ್ಜಿ ಆರಂಭವಾಗಿದ್ರು ಸರ್ವರ್ ಕಾಟ ತಪ್ಪುತ್ತಿಲ್ಲ. ಇಷ್ಟು ದಿನ ಗೃಹಜ್ಯೋತಿ ಆಯ್ತು ಇದೀಗ ಮನೆಯೊಡತಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಸರ್ವರ್ ಸಮಸ್ಯೆ ಕಾಡ್ತಿದೆ. 
ಮೊದಲ ದಿನ ಹೆಚ್ಚು ಸೇವಾಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆಯಾಗಿದ್ದ ಹಿನ್ನೆಲೆ ಮಹಿಳೆಯರು ಪರದಾಡಿದ್ರು. ಮೊದಲ ದಿನ 77 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದ್ದು, ಗೃಹಲಕ್ಷ್ಮಿ ಯೋಜನೆ 2ನೇ ದಿನದ ಅಂತ್ಯಕ್ಕೆ 8,81,639 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನು ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಕೆಲವು ಕಡೆ ಸರ್ವರ್ ಸಮಸ್ಯೆ ಬಗೆ ಹರಿದು ಅರ್ಜಿ ಸಲ್ಲಿಕೆ ಸ್ಪೀಡ್ ಆಗಿತ್ತು. ಆದ್ರೆ ಮುರನೇ ದಿನ ಸರ್ವರ್ ಸಮಸ್ಯೆ ಮತ್ತೆ ತಲೆದೋರಿದೆ. ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಇಲಾಖೆಯಿಂದ ಯಾವುದೇ ಗಡುವು ಇಲ್ಲ. ಮಹಿಳೆಯರು ನಿಗದಿ ಪಡಿಸಿದ ದಿನಾಂಕಗಳಂದು ಸೇವಾ ಕೇಂದ್ರಕ್ಕೆ ಹಾಜರಾಗುವಂತೆ ಸೇವಾ ಕೇಂದ್ರಗಳ ಅಧಿಕಾರಿಗಳು ಕೂಡ ಮನವಿ ಮಾಡಿದ್ದಾರೆ. ಇನ್ನು ಸರ್ವರ್ ಕಾಟದಿಂದ ಯಾವ ಕೆಲಸಕ್ಕೂ ಹೋಗದೇ ಬೆಂಗಳೂರು ಒನ್‌ನಲ್ಲಿಯೇ ಮಹಿಳೆಯರು ಕಾದು ಕುಳಿತಿದ್ದು, ಯಜಮಾನಿಯರು ಹೈರಾಣಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

48 ಗಂಟೆ ಕೆಲಸ ಮಾಡಿದರೆ 3 ದಿನ ವೀಕಾಫ್: ಕೇಂದ್ರದಿಂದ ಕಾರ್ಮಿಕ ಹೊಸ ನಿಯಮ

ದರ್ಶನ್ ಅರೆಸ್ಟ್ ಆದಾಗ ಪುತ್ರ ವಿನೀಶ್ ಪರಿಸ್ಥಿತಿ ಹೇಗಾಗಿತ್ತು: ವಿವರಿಸಿದ ಪತ್ನಿ ವಿಜಯಲಕ್ಷ್ಮಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ನಾನೇ ಸಿಎಂ, 2028 ಕ್ಕೂ ನಾವೇ ಅಧಿಕಾರಕ್ಕೆ ಬರೋದು: ಸದನದಲ್ಲಿ ಸಿದ್ದರಾಮಯ್ಯ ಮಹತ್ವದ ಘೋಷಣೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments