Select Your Language

Notifications

webdunia
webdunia
webdunia
webdunia

ಪ್ರತಿಭಟನೆಯಿಂದ ವಿಚಲಿತನಾಗಿಲ್ಲ, ಪರಧರ್ಮ ದ್ವೇಷದ ಪರಮಾವಧಿ ಇದು : ಪೇಜಾವರ ಶ್ರೀ ಗುಡುಗು

ಪ್ರತಿಭಟನೆಯಿಂದ ವಿಚಲಿತನಾಗಿಲ್ಲ, ಪರಧರ್ಮ ದ್ವೇಷದ ಪರಮಾವಧಿ ಇದು : ಪೇಜಾವರ ಶ್ರೀ ಗುಡುಗು
ಉಡುಪಿ , ಭಾನುವಾರ, 2 ಜುಲೈ 2017 (14:55 IST)
ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮಸೇನೆ ರಾಜ್ಯದಾದ್ಯಂತ ನಡೆಸುತ್ತಿರುವ ಪ್ರತಿಭಟನೆಯಿಂದ ವಿಚಲಿತರಾಗಿಲ್ಲ. ಪರಧರ್ಮ ದ್ವೇಷದ ಪರಮಾವಧಿ ಇದು ಎಂದು ಪೇಜಾವರ ಶ್ರೀಗಳು ಗುಡುಗಿದ್ದಾರೆ.
 
ಹಿಂದು ಧರ್ಮಕ್ಕೆ ಅಪಚಾರವಾಗಿಲ್ಲ. ಬದಲಿಗೆ ಹಿಂದು ಧರ್ಮದ ಗೌರವ ಹೆಚ್ಚಾಗಿದೆ. ಇತರ ಧರ್ಮದವರೊಂದಿಗೆ ಹಿಂದೂ ಧರ್ಮದಲ್ಲಿಯೂ ಸಹಿಷ್ಣುತೆ ಇರಬೇಕಾಗಿದೆ ಎಂದು ತಿರುಗೇಟು ನೀಡಿದ್ದಾರೆ.
 
ಶ್ರೀಕೃಷ್ಣಮಛಠದ ಹೊರಗಿನ ಆವರಣದಲ್ಲಿ ನಮಾಜ್ ಮಾಡಲು ಮುಸ್ಲಿಂ ಸಹೋದರರಿಗೆ ಅವಕಾಶ ನೀಡಲಾಗಿದೆ. ಕೃಷ್ಣಮಠದ ಹೊರಗಡೆ ನಮಾಜ್ ಮಾಡಿದರೆ ಏನು ಅಪರಾಧ? ಮಠಕ್ಕೆ ಅಪಚಾರವಾಗುತ್ತಾ? ಇದು ವಿರೋಧ ಮಾಡುವುದರಲ್ಲಿ ಅರ್ಥವುಂಟಾ? ಇನ್ನೊಂದು ಧರ್ಮದ ಮೇಲೆ ಇಷ್ಟು ದ್ವೇಷವಿರಬಾರದು. ಇದು ಬಹಳ ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
ವಿರೋಧ ಮಾಡುವವರಿಗೆ ಶಾಸ್ತ್ರ, ಸಂಪ್ರದಾಯ ಗೊತ್ತಿಲ್ಲ. ಅದು ಇಫ್ತಾರ್‌ಕೂಟವಲ್ಲ ಭೋಜನಕೂಟ. ಭೋಜನಕೂಟದಲ್ಲಿ ಪ್ರಾರ್ಥನೆ ಮಾಡಿದರೆ ತಪ್ಪಾಯಿತಾ ಎಂದು ಪೇಜಾವರ ಶ್ರೀಗಳು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಾಫಿಕ್ ರೂಲ್ಸ್ ಬ್ರೇಕ್: ಬಿಜೆಪಿ ನಾಯಕನಿಗೆ ದಂಡ ವಿಧಿಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ಎತ್ತಂಗಡಿ