Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಬಡವರು ಉಪವಾಸ ನಿದ್ರಿಸಬಾರದು: ರಾಹುಲ್

ಬೆಂಗಳೂರಿನಲ್ಲಿ ಬಡವರು ಉಪವಾಸ ನಿದ್ರಿಸಬಾರದು: ರಾಹುಲ್
ಬೆಂಗಳೂರು , ಬುಧವಾರ, 16 ಆಗಸ್ಟ್ 2017 (12:43 IST)
ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿರುವ ಪ್ರತಿಯೊಬ್ಬರಿಗೆ ರೋಟಿ, ಕಪಡಾ, ಮಕಾನ್, ದೊರೆಯುವಂತಾಗಲು ಶ್ರಮಿಸಿದ್ದರು. ಇದೀಗ ಕರ್ನಾಟಕದಲ್ಲಿ ಇಂದಿರಾ ಕನಸನ್ನು ನನಸಾಗಿಸುವ ಪ್ರಯತ್ನ ಇಲ್ಲಿ ನಡೆದಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಯಾರೂ ಉಪವಾಸ ಮಲಗುವಂತಾಗಬಾರದು.ಯ. ಯಾವುದೇ ಬಡವ ವ್ಯಕ್ತಿ ಹಸಿದುಕೊಂಡಿರಬಾರದು. ಪ್ರತಿಯೊಬ್ಬರ ಹಸಿವು ನೀಗಿಸಬೇಕು ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸು ಈಡೇರಿದೆ ಎಂದು ತಿಳಿಸಿದ್ದಾರೆ.
 
ಇಂದಿರಾ ಕ್ಯಾಂಟಿನ್‌ನಲ್ಲಿ 5 ರೂ,ಗೆ ತಿಂಡಿ ಮತ್ತು 10 ರೂಪಾಯಿಗೆ ಊಟ ದೊರೆಯಲಿದೆ. ಆಹಾರದ ಗುಣಮಟ್ಟ ಪ್ರತಿಷ್ಠಿತ ಹೋಟೆಲ್‌ಗಳಲ್ಲಿರುವಂತೆ ಕಾಪಾಡಿಕೊಳ್ಳಲಾಗುವುದು. ಶುಚಿತ್ವದತ್ತ ಗಮನಹರಿಸುವಂತೆ ಸಲಹೆ ನೀಡಿದ್ದೇನೆ. ಸಂತೋಷದಿಂದ ಕ್ಯಾಂಟಿನ್‌ ಉದ್ಘಾಟಿಸಿದ್ದೇನೆ ಎಂದರು.
 
ಬಡವರಿಗೆ, ದೀನದಲಿತರಿಗೆ, ಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ಆಹಾರ ದೊರೆಯಬೇಕು. ಈ ಉದ್ದೇಶದಿಂದಲೇ ಇಂದಿರಾ ಕ್ಯಾಂಟಿನ್‌ನಲ್ಲಿ 5 ರೂಗೆ ತಿಂಡಿ ಮತ್ತು 10 ರೂ.ಗೆ ಊಟದ ದರವನ್ನು ನಿಗದಿಪಡಿಸಲಾಗಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ 127 ವರ್ಷಗಳಲ್ಲೇ ದಾಖಲೆಯ ಮಳೆ