Select Your Language

Notifications

webdunia
webdunia
webdunia
webdunia

ಹುಳುಹುಪ್ಪಟೆಗಳ ಕಾಟದಿಂದ ಸಂತ್ರಸ್ಥರಲ್ಲಿ ಹೆಚ್ಚಿದ ಸಂಕಷ್ಟ

ಹುಳುಹುಪ್ಪಟೆಗಳ ಕಾಟದಿಂದ ಸಂತ್ರಸ್ಥರಲ್ಲಿ ಹೆಚ್ಚಿದ ಸಂಕಷ್ಟ
ಕೊಡಗು , ಶುಕ್ರವಾರ, 24 ಆಗಸ್ಟ್ 2018 (14:55 IST)
ನಿರಂತರವಾಗಿ ಮಳೆ ಒಂದೆಡೆ ಹೈರಾಣಾಗಿಸಿದರೆ, ಜಲ ಪ್ರಳಯ ಮತ್ತಷ್ಟು ಬದುಕನ್ನು ದುರ್ಬಲಗೊಳಿಸಿದೆ. ಏತನ್ಮಧ್ಯೆ ಹುಳ ಹುಪ್ಪಟೆಗಳ ಕಾಟ ಪ್ರವಾಹ ಸಂತ್ರಸ್ಥರನ್ನು ಚಿಂತೆಗೀಡಾಗುವಂತೆ ಮಾಡಿದೆ.

ಕೊಡಗು ಹಾಗೂ ಕೇರಳದಲ್ಲಿ ಪ್ರವಾಹ ಸಂತ್ರಸ್ಥರಿಗೆ ಈಗ ಹೊಸ ಚಿಂತೆ ಶುರುವಾಗಿದೆ. ಜಲ ಪ್ರಳಯ ಸಾಕಷ್ಟು ಅನಾಹುತ ಸೃಷ್ಠಿಸಿರುವ ಬೆನ್ನಲ್ಲೆ ಇದೀಗ ವಿಷ ಜಂತುಗಳ ಕಾಟ ಶುರುವಾಗಿದೆ. ಹಲವು ಕಡೆಗಳಲ್ಲಿ ಮಳೆ ಕೊಂಚ ಬಿಡುವು ನೀಡಿದೆ. ಹೀಗಾಗಿ ಅಲ್ಲೆಲ್ಲ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಅಳಿದುಳಿದ ಮನೆಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರುವ ಜನರಿಗೆ ವಿಷ ಜಂತುಗಳು ಮನೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮನೆಗಳಲ್ಲಿ, ಇಲಿ, ಹಾವು, ಮುಂಗುಸಿ, ಚೇಳು ಅಲ್ಲದೇ ಕೆಲವೆಡೆ ಮೊಸಳೆಗಳೂ ಸಹ ಮನೆಗಳಲ್ಲಿ ಕಾಣಿಸಿಕೊಂಡಿವೆ. ಇದರಿಂದ ಸಂತ್ರಸ್ಥರು ಚಿಂತೆಗೆ ಈಡಾಗುವಂತೆ ಆಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿ ಮೇಲೆ ತಮ್ಮ ವಿಕೃತಿಯನ್ನು ತೋರಿದ್ದಲ್ಲದೇ, ಹೀಗೆಲ್ಲಾ ಮಾಡಿ ಹಿಂಸೆ ಕೊಟ್ಟರು ಕಾಮುಕರು!