Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಕತ್ತು ಸೀಳಿ ಯುವತಿಯ ಬರ್ಬರ ಕೊಲೆ

ಬೆಂಗಳೂರಲ್ಲಿ ಕತ್ತು ಸೀಳಿ ಯುವತಿಯ ಬರ್ಬರ ಕೊಲೆ
ಬೆಂಗಳೂರು: , ಬುಧವಾರ, 24 ಮೇ 2017 (16:02 IST)
ನಗರದ ಈಜಿಪುರ ರಾಮಮಂದಿರ ಬಳಿ ತಮಿಳುನಾಡು ಮೂಲದ 25 ವರ್ಷ ವಯಸ್ಸಿನ ಪ್ರಿಯಾ ಎನ್ನುವ ಯುವತಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
 
ಮೂರು ದಿನಗಳ ಹಿಂದೆ ಕೊಲೆ ನಡೆದಿರುವ ಶಂಕೆಯಿದ್ದು, ಐದು ದಿನಗಳ ಹಿಂದಷ್ಟೆ ವಾಸಕ್ಕಾಗಿ ಮನೆಯನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಪ್ರಿಯಾ ಹತ್ಯೆಯ ನಂತರ ಆಕೆಯ ಸ್ನೇಹಿತೆ ನಾಪತ್ತೆಯಾಗಿರುವುದರಿಂದ ಆಕೆಯೇ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.  
 
ಘಟನೆಯ ಕುರಿತಂತೆ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮಹಿಳೆ ಉಜ್ಮಾಗೆ ಪಾಕಿಸ್ತಾನದಿಂದ ಬಿಡುಗಡೆ