ಸಿಎಂ ಲಂಚ ಕೇಳಿದ ವಿಡಿಯೋ ನಮ್ಮಲ್ಲಿದೆ ಎಂದ ಶಾಸಕ!

Webdunia
ಶನಿವಾರ, 9 ಫೆಬ್ರವರಿ 2019 (16:10 IST)
ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಹಣದ ಆಮಿಷ ಒಡ್ಡಿ ಗಾಳ ಹಾಕುತ್ತಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪನವರ ಆಡಿಯೋವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಲಂಚ ಕೇಳುವ ವಿಡಿಯೋ ನಮ್ಮಲ್ಲಿದೆ ಎಂದು ಶಾಸಕರೊಬ್ಬರು ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಧಾನ ಪರಿಷತ್ ಸದಸ್ಯರಾಗಲು ಒಬ್ಬರಿಗೆ 25 ಕೋಟಿ ರೂ. ಲಂಚ ಕೇಳುವ ಧ್ವನಿ ಮತ್ತು ದೃಶ್ಯ ಸುರಳಿ ನಮ್ಮಲ್ಲಿದೆ. ಹೀಗಂತ ಬಿಜೆಪಿ ಮುಖಂಡ ಹೇಳಿಕೊಂಡಿದ್ದಾರೆ.

ಸಿಎಂ ಲಂಚ ಕೇಳಿರುವ ವಿಡಿಯೋವನ್ನು ಸೋಮವಾರ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಸೋಮವಾರ ಸದನದಲ್ಲಿ ಧ್ವನಿ ಸುರುಳಿಯ ಬಗ್ಗೆ ಪ್ರಸ್ತಾಪಿಸಿ ಅದನ್ನು ಸಭಾಧ್ಯಕ್ಷರಿಗ ತಲುಪಿಸಿ, ಧ್ವನಿ ಸುರಳಿಯ ಸತ್ಯಾಸತ್ಯತೆಯನ್ನು ಅರಿಯಲು ಸಭಾಧ್ಯಕ್ಷರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ತಮ್ಮ ಕೊಠಡಿಗೆ ಕರೆಸಿ ವಿಚಾರಣೆ ಮಾಡುವಂತೆಯೂ ಬಿಜೆಪಿ ನಾಯಕರು ಸದನದಲ್ಲಿ ಮನವಿ ಮಾಡುವರು ಎಂದು ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಕೀಳುಮಟ್ಟದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲೇನೂ ಅಲ್ಲ ಎಂದು ಅವರು ದೂರಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು: ಇನ್ನೇನೂ ಮದುವೆಗೆ ಎರಡು ದಿನವಿರುವಾಗ ನಾಪತ್ತೆಯಾದ ಹುಡುಗು, ಕೊನೆಗೂ ಪತ್ತೆ

ಅಕ್ರಮವಾಗಿ ಭಾರತಕ್ಕೆ ಬಂದಿದ್ದ 10 ಬಾಂಗ್ಲಾದೇಶಿ ಪ್ರಜೆಗಳಿಗೆ 2 ವರ್ಷ ಜೈಲು

ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು, ನಿರ್ದೇಶಿಸುತ್ತಿದೆ: ರಾಹುಲ್ ಗಾಂಧಿ

ಆರ್ ಅಶೋಕ್ ಎದುರೇ ನಾನೇ ವಿರೋಧ ಪಕ್ಷದ ನಾಯಕನೆಂದ ಬಸನಗೌಡ ಪಾಟೀಲ್ ಯತ್ನಾಳ್

ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments