Select Your Language

Notifications

webdunia
webdunia
webdunia
webdunia

ನಾಪತ್ತೆಯಾದ ಮಗು: ಶವವನ್ನು ಮರಳಿನಲ್ಲಿ ಹೂತಿಟ್ಟಿದ್ದ ಹಂತಕರು!

ಕಲಬುರಗಿ
ಕಲಬುರಗಿ , ಬುಧವಾರ, 8 ಡಿಸೆಂಬರ್ 2021 (08:30 IST)
ಕಲಬುರಗಿ : ಕಲಬುರಗಿ ನಗರದ ಫಿರ್ದೋಷ್ ಕಾಲೋನಿಯಿಂದ ನಾಪತ್ತೆಯಾಗಿದ್ದ 2 ವರ್ಷದ ಅಬೋಧ ಮಗು ಶವವಾಗಿ ಪತ್ತೆಯಾಗಿದೆ.
ಮಗುವನ್ನು ಕೊಲೆ ಮಾಡಿದ್ದ ನಿರ್ದಯಿ ಹಂತಕರು ಶವವನ್ನು ಮನೆಯ ಸಮೀಪ ಮರಳಿನಲ್ಲಿ ಹೂತಿಟ್ಟಿರುವುದು ಪತ್ತೆಯಾಗಿದೆ. ಮೊಹಮ್ಮದ್ ಮುಜಮಿಲ್ ಅಹ್ಮದ್ ಕೊಲೆಯಾದ ಮಗು. ಕೊಲೆಯಾದ ಮಗುವಿನ ಮೈಮೇಲೆ ಸುಟ್ಟ ಗಾಯಗಳು ಕಂಡುಬಂದಿವೆ. ಕಲಬುರಗಿ ವಿವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾಲಕ ಮೊಹಮ್ಮದ್ ಮುಜಮಿಲ್ ಅಹ್ಮದ್ ಡಿಸೆಂಬರ್ 6 ರಂದು ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಮನೆಯಿಂದ ನಾಪತ್ತೆಯಾಗಿದ್ದ. ನಿನ್ನೆ ಸಂಜೆ ಬಾಲಕನ ಶವ ಪತ್ತೆಯಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಗುಲಬರ್ಗಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಕ್ಕೆ ಐಎಂಎ ಸಲಹೆಗಳೇನು..?