Select Your Language

Notifications

webdunia
webdunia
webdunia
Saturday, 12 April 2025
webdunia

ಸಮ್ಮಿಶ್ರ ಸರ್ಕಾರ 101 % ಸುಭದ್ರವಾಗಿದೆ ಎಂದ ಸಚಿವ

ಸರಕಾರ
ಚಾಮರಾಜನಗರ , ಭಾನುವಾರ, 16 ಸೆಪ್ಟಂಬರ್ 2018 (19:53 IST)
ಸಮ್ಮಿಶ್ರ ಸರ್ಕಾರ 101 % ಸುಭದ್ರವಾಗಿದೆ ಎಂದು ಸಚಿವ ಹೇಳಿದ್ದಾರೆ. ಇಲ್ಲಿ ತಾಕತ್ತಿನ ಪ್ರಶ್ನೆ ಇಲ್ಲ ಬಹುಮತ ಇರೋದೆ ತಾಕತ್ತು. ತಾಕತ್ತು ಪ್ರದರ್ಶನ ಮಾಡೋಕೆ ನಾವೇನೂ ಜಟ್ಟಿಗಳಲ್ಲ, ಮೈಸೂರು ದಸರಾಕ್ಕೆ ಕುಸ್ತಿಗೆ ಬಂದಿಲ್ಲ.
ಸಂವಿಧಾನ ಬದ್ದವಾಗಿ ಬಹುಮತವಿದೆ. ಸಿದ್ದರಾಮಯ್ಯ ಬಂದ ನಂತರ ಈ ಗೊಂದಲಗಳೆಲ್ಲ ನಿಂತು ಹೋಗುತ್ತದೆ ಎಂದು
ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.

ಸಿದ್ದರಾಮಯ್ಯ ವಿದೇಶಕ್ಕೆ ಹೋಗುವ ಮುನ್ನಾ ಸರ್ಕಾರ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿ ಹೋಗಿದ್ದಾರೆ ಎಂದ ಅವರು, ಕುದುರೆ ವ್ಯಾಪಾರನೂ ಇಲ್ಲ ಆನೆ ವ್ಯಾಪಾರನೂ ಇಲ್ಲ. ಈಶ್ವರಪ್ಪ ಹಿರಿಯರು, ಅವರ ಬಗ್ಗೆ ಗೌರವವಿದೆ.
ನಮ್ಮ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿರುತ್ತದೆ ಎಂದರು.

ಚಾಮರಾಜನಗರದ ಯಳಂದೂರಿನಲ್ಲಿ ಶಿಕ್ಷಣ ಸಚಿವ ಎನ್. ಮಹೇಶ್ ಈ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿ ಜನತಾದರ್ಶನ ಇಲ್ಲ