Select Your Language

Notifications

webdunia
webdunia
webdunia
webdunia

ಮಹದಾಯಿ ಕಾಮಗಾರಿ ವಿಳಂಬ ಮಾಡೋದಿಲ್ಲ ಎಂದ ಸಚಿವ

ಮಹದಾಯಿ ಕಾಮಗಾರಿ ವಿಳಂಬ ಮಾಡೋದಿಲ್ಲ ಎಂದ ಸಚಿವ
ಬೆಳಗಾವಿ , ಬುಧವಾರ, 26 ಸೆಪ್ಟಂಬರ್ 2018 (16:17 IST)
ಈ ರಾಜ್ಯದ ಜನರ ಜನತೆಯ ಬೇಡಿಕೆಯಂತೆ ಸಿಕ್ಕಿರುವ ಮಹದಾಯಿ ನೀರು ಬಳಸಿಕೊಳ್ಳಲು ಸಿದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ನಾವು ಮಹದಾಯಿ ಯೋಜನೆ ಕಾಮಗಾರಿ ವಿಳಂಬ ಮಾಡಲ್ಲ. ಹೀಗಂತ ನೀರಾವರಿ ಸಚಿವ ಹೇಳಿದ್ದಾರೆ.

ಬೆಳಗಾಗಿ ಜಿಲ್ಲೆಯ ಕಣಕುಂಬಿ ಪ್ರವಾಸಿ ಮಂದಿರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು.
ಸಚಿವರಿಗೆ ಶಾಸಕಿಯರಾದ ಅಂಜಲಿ ನಿಂಬಾಳ್ಕರ, ಲಕ್ಷ್ಮೀ ಹೆಬ್ಬಾಳಕರ ಮತ್ತು ಅಧಿಕಾರಿಗಳು ಸಾಥ್ ನೀಡಿದರು.
ಮಹದಾಯಿ ಹೋರಾಟಕ್ಕೆ ಸ್ಪಂದಿಸಿದ ಮಾಧ್ಯಮದವರು ಮತ್ತು ಎಲ್ಲಾ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ, ಮಹದಾಯಿ ತೀರ್ಪಿನಿಂದ ನಮಗೆ ಅನ್ಯಾಯವಾಗಿದೆ. ತೀರ್ಪಿನ ಬಗ್ಗೆ ಸಂತೋಷಪಟ್ಟು ಹೇಳಲು ನಾನು ಸರ್ಕಾರದ ಪರ ಸಿದ್ದನಾಗಿಲ್ಲ. ಮಹದಾಯಿ ಜಲಾನಯನ ಪ್ರದೇಶದಲ್ಲಿ 188 ಟಿಎಂಸಿ ನೀರು ಇರುವುದು ಸ್ಪಷ್ಟವಾಗಿದೆ.

140 ಕ್ಕೂ ಅಧಿಕ ಟಿಎಂಸಿ ನೀರು ಸಮುದ್ರಪಾಲಾಗಿದೆ. ಇವತ್ತು ನಾನು ಶಾಸಕರು, ಅಧಿಕಾರಿಗಳ ಜೊತೆ ಕಣಕುಂಬಿಗೆ ಭೇಟಿ ನೀಡಿದ್ದೇನೆ. ಅನ್ಯಾಯದ ವಿರುದ್ಧ ಸುಪ್ರೀಂ ಕೋರ್ಟಗೆ ಹೋಗಲು ಸಿದ್ಧ ಎಂದ ಅವರು, ಮಹದಾಯಿ ಕಾಮಗಾರಿ ನಡೆಸಲು ಸುಪ್ರೀಂ ಕೋರ್ಟ ಕೊಟ್ಟಿರುವ ಸ್ಟೇ ತೆರವುಗೊಳಿಸಲು, ಕೇಂದ್ರ ಸರ್ಕಾರ ಗೇಜೆಟ್ ಆಗಬೇಕು.  ಅರಣ್ಯ ಇಲಾಖೆಗೆ ಕೇಂದ್ರ ಸರ್ಕಾರದ ಅನುಮತಿ ಬೇಕು.  ಈ ಮೂರು ಆದ್ರೆ ನಾವು ಆದಷ್ಟು ಬೇಗ ಕೆಲಸ ಆರಂಭಿಸುತ್ತೇವೆ.

731 ಹೆಕ್ಟೇರ್ ಜಮೀನು ಬೇಕಿದೆ. ಕಳಸಾಗೆ 499 ಅರಣ್ಯ ಜಮೀನು, 199 ಖಾಸಗಿ ಜಮೀನು ಸ್ವಾಧೀನಕ್ಕೆ ಕ್ರಮಕೈಗೊಳ್ಳುತ್ತೇವೆ. ಸಮುದ್ರಕ್ಕೆ ಹೋಗದೆ ವೇಸ್ಟ್‌ ಮಾಡದೇ ನೀರು ಬಳಸಿಕೊಳ್ಳುತ್ತೇವೆ ಎಂದರು.  

 

 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಮ್ಯಾ ವಿರುದ್ಧ ದೂರು ದಾಖಲು: ಕಾರಣವೇನು ಗೊತ್ತಾ?