Select Your Language

Notifications

webdunia
webdunia
webdunia
webdunia

ಪಾರ್ಶ್ವವಾಯು ಪೀಡಿತ ಬಿಇಒ ಮನೆಗೆ ಭೇಟಿ ನೀಡಿದ ಶಿಕ್ಷಣ ಸಚಿವ

ಪಾರ್ಶ್ವವಾಯು ಪೀಡಿತ ಬಿಇಒ ಮನೆಗೆ ಭೇಟಿ ನೀಡಿದ ಶಿಕ್ಷಣ ಸಚಿವ
ಧಾರವಾಡ , ಗುರುವಾರ, 10 ಸೆಪ್ಟಂಬರ್ 2020 (23:50 IST)
ಅನಾರೋಗ್ಯ ಪೀಡಿತ ಕೆಇಎಸ್ ಅಧಿಕಾರಿ, ಹಿರಿಯ ಉಪನ್ಯಾಸಕರ ಮನೆಗೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ ಶೇ.100 ರಷ್ಟು ಅಂಗವೈಕಲ್ಯದಿಂದ ಹಾಸಿಗೆ ಹಿಡಿದಿರುವ ಕೆಇಎಸ್ ಅಧಿಕಾರಿ, ಬೆಳಗಾವಿ ಡಯಟ್ ಹಿರಿಯ ಉಪನ್ಯಾಸಕ ಮಹದೇವ ಬ.ಮಾಳಗಿ ಅವರ ನಿವಾಸಕ್ಕೆ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶಕುಮಾರ್ ಅವರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಇದೇ ವೇಳೆ ಅಧಿಕಾರಿಯ ಸ್ವಯಂ ನಿವೃತ್ತಿ ಆದೇಶವನ್ನು ಹಸ್ತಾಂತರಿಸಿದರು.

1999 ಬ್ಯಾಚಿನ ಕೆಇಎಸ್ ಅಧಿಕಾರಿಯಾಗಿರುವ ಮಹದೇವ ಮಾಳಗಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ, ಕ್ಷೇತ್ರ ಶಿಕ್ಷಣಾಧಿಕಾರಿ, ಡಯಟ್ ಹಿರಿಯ ಉಪನ್ಯಾಸಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ‌‌. 2015 ರಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿರುವುದರಿಂದ , ಅವರ ದೈಹಿಕ ಸಾಮರ್ಥ್ಯ ಇಲ್ಲದಿರುವದನ್ನು ಪರಿಗಣಿಸಿ ಸರ್ಕಾರ ಸ್ವಯಂ ನಿವೃತ್ತಿ ಆದೇಶ ನೀಡಿದೆ.

ಕುಟುಂಬದ ಸದಸ್ಯರು ಅನುಕಂಪ ಆಧಾರಿತ ನೌಕರಿಗೆ ಮನವಿ ಮಾಡಿದ್ದಾರೆ, ಇದು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗಬೇಕಾದ ವಿಷಯವಾಗಿರುವದರಿಂದ ಮುಂಬರುವ ದಿನಗಳಲ್ಲಿ ವಿಷಯವನ್ನು ಸಭೆಗೆ ಮಂಡಿಸಲು ತಮ್ಮ ಶಕ್ತಿಮೀರಿದ ಪ್ರಯತ್ನ ಮಾಡುತ್ತೇನೆ ಎಂದ ಸಚಿವರು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಡಾನೆಗಳನ್ನು ಸೆರೆಹಿಡಿಯಿರಿ ಎಂದ ಸರಕಾರ