Daily Horoscope
✕

ತಲೆ ನೋವಾಗಿದ್ದ ಚಿರತೆ ಕಡೆಗೂ ಸೆರೆ

Webdunia
ಶುಕ್ರವಾರ, 4 ನವೆಂಬರ್ 2022 (17:57 IST)
ಬಡಾವಣೆಗೆ ಚಿರತೆ ನುಗ್ಗಿ ಮೂವರ ಮೇಲೆ ಅಟ್ಯಾಕ್ ಮಾಡಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರದ ಕನಕಗಿರಿಯಲ್ಲಿ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಹಾಗೂ ಸೈಕಲ್ ಸವಾರರ ಮೇಲೆ ಹಾಗೂ ಅರಣ್ಯ ಸಿಬ್ಬಂದಿಯ ಮೇಲೂ ಚಿರತೆ ದಾಳಿ ಮಾಡಿದೆ. ಇದರಿಂದ ಕೆ.ಆರ್.ನಗರದ ಪಟ್ಟಣದ ಜನರಲ್ಲಿ ಆತಂಕದ ವಾತಾವರಣ ಮನೆಮಾಡಿತ್ತು. ಮೊನ್ನೆಯಷ್ಟೆ ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಚಿರತೆ ದಾಳಿ ಮಾಡಿತ್ತು. ಪರಿಣಾಮ ಚಿರತೆ ದಾಳಿಗೆ ಯುವಕ ಮೃತಪಟ್ಟಿದ್ದ. ಇವತ್ತು ಕೆ.ಆರ್.ನಗರ ಪಟ್ಟಣದ ಜನರ ಮೇಲೆ ದಾಳಿ ಮಾಡಿದ ಹಿನ್ನೆಲೆ, ಗಾಯಾಳುಗಳಿಗೆ ಕೆ.ಆರ್.ನಗರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ತಲೆನೋವಾಗಿದ್ದ ಚಿರತೆ ಕಡೆಗೂ ಪಟ್ಟಣದ 18 ನೇ ವಾರ್ಡ್‌ನಲ್ಲಿ ಸೆರೆ ಸಿಕ್ಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕೆ ಮದ್ದು ನೀಡಿ ಚಿರತೆ ಸೆರೆ‌ಹಿಡಿದಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಮೈಸೂರು ಮೃಗಾಲಯ ಪಾಲ್ಗೊಂಡಿತ್ತು. ಇದರಿಂದ ಚಿರತೆ ಸೆರೆಯಿಂದ ನಾಗರೀಕರು ನಿಟ್ಟುಸಿರು ಬಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು CJP ಪ್ರತಿಭಟನೆಗೆ ಬಿಗ್ ಟ್ವಿಸ್ಟ್: ಮನೆ ಕೊಡ್ತೀವಿ ಅಂತ ಮಡಿಕೇರಿ ಜನರನ್ನು ಕರೆತಂದ್ರಾ Video

ಜನರು ಗುಳೆ ಹೋಗೋದು ಸಂಪ್ರದಾಯ: ಸಚಿವ ಪರಮೇಶ್ವರ್ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

ಮೈಸೂರು ದಸರಾ: ಚಿನ್ನದ ಅಂಬಾರಿ ಹೊರುವ 'ಕ್ಯಾಪ್ಟನ್' ರೇಸ್‌ನಿಂದ ಮಹೇಂದ್ರ ಔಟ್; ಕಾರಣವೇನು

ಕರ್ನಾಟಕಾದ್ಯಂತ ಐಸ್‌ಕ್ರೀಮ್ ಘಟಕಗಳ ಮೇಲೆ ದಿಢೀರ್ ದಾಳಿ: ಆಹಾರ ಇಲಾಖೆ ಬಿಗ್ ಆಪರೇಷನ್

Karnataka Weather: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಂಜೆ ಮಳೆ ಮುನ್ಸೂಚನೆ

ಮುಂದಿನ ಸುದ್ದಿ
Show comments