ಹಣ ಕೊಡದಿದ್ದಕ್ಕೆ ಮುಖಂಡನಿಗೆ ಥಳಿತ

Webdunia
ಶನಿವಾರ, 22 ಏಪ್ರಿಲ್ 2023 (17:50 IST)
ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಪಿರಮೇನಹಳ್ಳಿ ಗ್ರಾಮದ ಮುಖಂಡ ಮಂಜು ಹಣ ಕೊಡುವುದಾಗಿ ನಂಬಿಸಿ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಎಂಬುವವರ ರೋಡ್ ಶೋಗೆ ಕರೆದೊಯ್ದು ಹಣ ಕೊಟ್ಟಿಲ್ಲ. ಇದೇ ಕಾರಣಕ್ಕೆ ಗ್ರಾಮದ ಮಹಿಳೆಯೊಬ್ಬರು ಆತನನ್ನ ಅಟ್ಟಾಡಿಸಿ ಹೊಡೆದಿರುವ ಘಟನೆ ತರೀಕೆರೆ ತಾಲೂಕಿನ ಪಿರಮೇನಹಳ್ಳಿಯಲ್ಲಿ ನಡೆದಿದೆ.. ನಿನ್ನೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ರೋಡ್ ಶೋ ಮಾಡಿದ್ದು, ಗ್ರಾಮದ ಜನರಿಗೆ ಹಣ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿ ಬಳಿಕ ಹಣ ನೀಡಿಲ್ಲ.​ ಇದಕ್ಕೆ ಕೋಪಗೊಂಡ ಗ್ರಾಮಸ್ಥರು ಮುಖಂಡ ಮಂಜು ಮೇಲೆ ಹಲ್ಲೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಜೊತೆ ಬ್ರೇಕ್ ಫಾಸ್ಟ್ ಬಳಿಕ ಫೈನಲ್ ನಿರ್ಧಾರ ಹೇಳಿದ ಸಿಎಂ ಸಿದ್ದರಾಮಯ್ಯ

ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಆಪರೇಷನ್ ಸಾಗರ್ ಬಂಧು ಆರಂಭಿಸಿದ ಭಾರತ

ರಾಜ್ಯದ ಎಲ್ಲ ಸಮಸ್ಯೆಗೆ ನಾಟಿಕೋಳಿಯಲ್ಲಿ ಪರಿಹಾರವಿದೆಯೇ: ಎನ್.ರವಿಕುಮಾರ್ ಪ್ರಶ್ನೆ

ಶ್ರೀಲಂಕಾಗೆ ಸಹಾಯ ಮಾಡಲು ಹೋಗಿ ಮುಜುಗರಕ್ಕೀಡಾದ ಪಾಕಿಸ್ತಾನ, ಆಗಿದ್ದೇನು ಗೊತ್ತಾ

ಎರಡು ರಾತ್ರಿ ತೋಟದಲ್ಲೇ ಕಳೆದ ಮಗು, ಕೊನೆಗೂ ಹುಡುಕಿಕೊಟ್ಟ ಸಾಕು ನಾಯಿ

ಮುಂದಿನ ಸುದ್ದಿ
Show comments