Webdunia - Bharat's app for daily news and videos

Install App

ಐಟಿ ದಾಳಿ ಬಿಜೆಪಿಯವರ ಮೇಲೂ ಆಗಿದೆ ಎಂದ ಕೇಂದ್ರ ಸಚಿವ

Webdunia
ಭಾನುವಾರ, 13 ಅಕ್ಟೋಬರ್ 2019 (15:51 IST)
ಐಟಿ ದಾಳಿ ಕೇವಲ ಕಾಂಗ್ರೆಸ್ ಮುಖಂಡರ ಮೇಲಷ್ಟೇ ಆಗದೇ ಬಿಜೆಪಿಯವರ ಮೇಲೂ ಆಗಿದೆ. ಆ ಬಗ್ಗೆ ಕಾಂಗ್ರೆಸ್ ನವರು ನೋಡಿಕೊಂಡು ಮಾತನಾಡಲಿ. ಹೀಗಂತ ಕೇಂದ್ರ ಸಚಿವ ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದು, ಐಟಿ ದಾಳಿ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ.  ಹೀಗಂತ ಜಿ.ಪರಮೇಶ್ವರ ಅವರೇ ಸ್ಪಷ್ಟ ಪಡಿಸಿದ್ದಾರೆ. ಹಾಗಾಗಿ ಇದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ.

ಬಹಳ ದೊಡ್ಡ ಪ್ರಮಾಣದಲ್ಲಿ ಐಟಿ ಮಾಹಿತಿಗಳನ್ನು ಕಲೆ ಹಾಕಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸೇರಿದಂತೆ ಅನ್ಯ ರಾಜ್ಯ ಗಳಲ್ಲಿನ ನೀಟ್ ಸೇಲ್ ಗಳು, ಕಾಲೇಜಿನ ಕೆಲವು ಆಡಳಿತ ಮಂಡಳಿಗಳು ಸೇರಿ ಮ್ಯಾನೇಜ್ಮೆಂಟ್ ಸೀಟ್ ಗಳಾಗಿ ಪರಿವರ್ತನೆ ಮಾಡಿ, ಕೋಟ್ಯಾಂತರ ರೂಪಾಯಿ ಹಣ ಗಳಿಸುವ ಕೆಲಸ ಮಾಡಲಾಗುತ್ತಿತ್ತು. ಇದು ಮಾಧ್ಯಮಗಳಲ್ಲೂ ಬಂದಿದೆ ಎಂದರು.

ಐಟಿ ದಾಳಿ ಕೇವಲ ಕಾಂಗ್ರೆಸ್ ನವರ ಮೇಲೆ ಅಷ್ಟೇ ಆಗಿಲ್ಲ. ಬಿಜೆಪಿಯ 10 ಜನರ ಮೇಲೂ ಆಗಿದೆ. ಅವರ ಹೆಸರು ಕೂಡಾ ಹೇಳಬಲ್ಲೆ. ಆದರೆ ಈಗ ಅದನ್ನು ಹೇಳುವುದು ಸರಿಯಲ್ಲ. ಕಾಂಗ್ರೆಸ್ ಆರೋಪಿಸುವ ಹೇಳಿಕೆಯನ್ನು ನಂಬುವದಕ್ಕಿಂತ ಮೋದಿ ಸರ್ಕಾರ ಬಂದ ನಂತರ ಕರ್ನಾಟಕದಲ್ಲಿ ಎಷ್ಟು ಬಾರಿ ಐಟಿ ದಾಳಿ ಆಗಿದೆ ಎಂಬುದನ್ನು ತಿಳಿದು ಕಾಂಗ್ರೆಸ್ ನವರು ಮಾತನಾಡಲಿ ಎಂದಿದ್ದಾರೆ.

         

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಾನು ಸತ್ತು ಮನೆಯ ಮಾಲಿಕರನ್ನು ರಕ್ಷಿಸಿದ ಸಾಹಸಿ ನಾಯಿ: ಕೊನೆಯ ಕ್ಷಣದ Video

ಬರಪೀಡಿತ ರೈತರಿಗೆ ಸರ್ಕಾರ ತಕ್ಷಣ 10 ಸಾವಿರ ಕೋಟಿ ರೂ ನೀಡಬೇಕು: ವಿಜಯೇಂದ್ರ

ಯಾರಿಗೂ ಅಸಮಾಧಾನವಿಲ್ಲ, ಯಾರೂ ರಾಜೀನಾಮೆ ನೀಡಲ್ಲ ಎಂದ ಬಿಕೆ ಹರಿಪ್ರಸಾದ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ತನ್ನ ಪಾಡಿಗೆ ನಡೆದು ಹೋಗುತ್ತಿದ್ದ ಬಾಲಕಿ ಅದೊಂದು ಕಾರಣಕ್ಕೆ ಪ್ರಾಣವೇ ಕಳೆದುಕೊಂಡಳು: ಶಾಕಿಂಗ್ Video

ಮುಂದಿನ ಸುದ್ದಿ
Show comments