Webdunia - Bharat's app for daily news and videos

Install App

ಪತ್ನಿಗೆ ಚಾಕುವಿನಿಂದ ಇರಿದ ಪತಿ

Webdunia
ಮಂಗಳವಾರ, 27 ಜೂನ್ 2023 (16:59 IST)
ಪತ್ನಿಯ ಮೇಲೆ ಅನುಮಾನ ಪಟ್ಟು ಪತಿ ಚಾಕು ಇರಿದಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾರ್ ಸ್ಟ್ರೀಟ್​ನಲ್ಲಿ ನಡೆದಿದೆ. ಪತ್ನಿ ಹೊಟ್ಟೆಗೆ ಚಾಕುವಿನಿಂದ ಇರಿದು ಪತಿ ದಯಾನಂದ ಅಲಿಯಾಸ್ ನಂದ ಸ್ಥಳದಿಂದ ಪರಾರಿಯಾಗಿದ್ದಾನೆ. ರಾತ್ರಿ 9.45 ರ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳು ಪತ್ನಿ ಪ್ರಿಯಾಂಕಳನ್ನ ಖಾಸಗಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ನೀಲಸಂದ್ರದ ದಯಾನಂದ ಎಂಬಾತ ಪ್ರಿಯಾಂಕಾಳನ್ನ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಪತಿ ದಯಾನಂದ ಸದಾ ಕುಡಿದು ಪತ್ನಿ ಮೇಲೆ ಅನುಮಾನ ಪಟ್ಟು ಗಲಾಟೆ ಮಾಡ್ತಿದ್ದ. ನಿನ್ನೆ ಕೂಡಾ ದಯಾನಂದ ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. ಏಕಾಏಕಿ ಮಲಗಿದ್ದ ಪತ್ನಿಯ ಜೊತೆ ಜಗಳ ತೆಗೆದು ಮಕ್ಕಳ ಮುಂದೆಯೇ ಚಾಕು ತೆಗೆದುಕೊಂಡು ಪತ್ನಿಗೆ ಇರಿದಿದ್ದಾನೆ. ರಕ್ತಸ್ರಾವವಾಗಿ ಪತ್ನಿ ಕಿರುಚಾಡ್ತಿದ್ದಂತೆ ಗಂಡ ಪರಾರಿಯಾಗಿದ್ದಾನೆ. ಸದ್ಯ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಎಂದ ಸಿಎಂ ಸಿದ್ದರಾಮಯ್ಯ

ಮಗನ ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ಶಾಸಕ ಪ್ರಭು ಚವಾಣ್, ಇದೆಲ್ಲ ಆ ಮಾಜಿ ಸಚಿವನ ಹುನ್ನಾರ

ಎಚ್‌ಆರ್‌ ಜತೆ ಸರಸವಾಡಿ ಫಜೀತಿಗೆ ಸಿಲುಕಿದ್ದ ಯುಎಸ್‌ ಟೆಕ್‌ ಕಂಪನಿ ಸಿಇಒ ರಾಜೀನಾಮೆ, ಎಚ್‌ಆರ್‌ ಅನ್ನು ರಜೆಯಲ್ಲಿ ಕಳುಹಿಸಿದ ಕಂಪನಿ

ಕಬಿನಿ ಜಲಾಶಯ ಭರ್ತಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಜೊತೆಯಾಗಿ ಬಾಗಿನ ಅರ್ಪಣೆ

ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

ಮುಂದಿನ ಸುದ್ದಿ
Show comments