Select Your Language

Notifications

webdunia
webdunia
webdunia
webdunia

ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‍ನಿಂದ ಕೂಯ್ದು ಕೊಲೆಗೈದ ಪತಿ!

ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‍ನಿಂದ ಕೂಯ್ದು ಕೊಲೆಗೈದ ಪತಿ!
ಮೈಸೂರು , ಶುಕ್ರವಾರ, 15 ಸೆಪ್ಟಂಬರ್ 2023 (09:57 IST)
ಮೈಸೂರು : ಹಣಕ್ಕಾಗಿ ಪೀಡಿಸಿ ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್ನಿಂದ ಕೂಯ್ದು ಕೊಲೆಗೈದ ಪ್ರಕರಣ ನಂಜನಗೂಡು ಸಮೀಪದ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ.

ಹತ್ಯೆಗೀಡಾದ ಮಹಿಳೆಯನ್ನು ಶೋಭಾ (26) ಎಂದು ಗುರುತಿಸಲಾಗಿದೆ. ಆಕೆಯ ಪತಿ ಮಂಜುನಾಥ್ (27) ಕೊಲೆಗೈದ ಆರೋಪಿಯಾಗಿದ್ದಾನೆ. ಆರೋಪಿ ಕುಡಿದು ಬಂದು ಹಣಕ್ಕಾಗಿ ಪೀಡಿಸಿದ್ದಾನೆ. ಬಳಿಕ ಮಹಿಳೆಯ ಕತ್ತನ್ನು ಸೀಳಿ ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

8 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು. ದಂಪತಿಗೆ ಐದು ವರ್ಷದ ಗಂಡು ಮಗುವಿದೆ. ಶೋಭಾ ತುಂಬು ಗರ್ಭಿಣಿಯಾದ ಕಾರಣ ತವರು ಮನೆಗೆ ಹೋಗಿದ್ದರು. ಈ ವೇಳೆ ತವರು ಮನೆಯಿಂದ ಹಣ ತರುವಂತೆ ಆರೋಪಿ ಆಗಾಗ ಹೆಂಡತಿ ಜೊತೆ ಜಗಳ ಮಾಡುತ್ತಿದ್ದ. ಅಲ್ಲದೇ ಹೆರಿಗೆಯ ಆರೈಕೆಗಾಗಿ ತವರು ಮನೆಗೆ ಬಂದಿದ್ದ ಪತ್ನಿ ಮನೆಗೆ ಬರುತ್ತಿಲ್ಲವೆಂದು ಜಗಳ ತೆಗೆದು ಬ್ಲೇಡ್ನಿಂದ ಆಕೆಯ ಕುತ್ತಿಗೆ ಕೂಯ್ದಿದ್ದಾನೆ.

ಕೂಡಲೇ ಶೋಭಾರನ್ನ ನಂಜನಗೂಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿಫಾ ವೈರಸ್ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ !