ಚೌಕಿದಾರ ಸರಿಯಾಗಿ ಕೆಲಸ ಮಾಡ್ತಿಲ್ಲ ಎಂದ ಗೃಹ ಸಚಿವ

Webdunia
ಶುಕ್ರವಾರ, 8 ಮಾರ್ಚ್ 2019 (18:51 IST)
ಚೌಕಿದಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಂತ ರಾಜ್ಯದ ಗೃಹ ಸಚಿವ ಆರೋಪ ಮಾಡಿದ್ದಾರೆ.

ರಫೆಲ್ ಡೀಲ್ ಗೆ ಸಂಭಂದಿಸಿದ  ಕಡತಗಳು ಕಳ್ಳತನವಾಗಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಗೆ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ದಲ್ಲಿ‌ ಎಮ್.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಚೌಕಿದಾರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗತ್ತೆ. ದೇಶದ ಸೂಕ್ಷ್ಮ ಕಡತಗಳನ್ನೆ ಸರಿಯಾಗಿ ರಕ್ಷಣೆ ಮಾಡಲಾಗುತ್ತಿಲ್ಲ.

ದೇಶದಲ್ಲಿ ರಕ್ಷಣೆ ಯಾವ ಸ್ಥಿತಿಗೆ  ಇದೆ, ಇದನ್ನು ಮಾಧ್ಯಮದವರೇ ತಿಳಿದುಕೊಳ್ಳಬೇಕು ಎಂದು ಎಮ್.ಬಿ ಪಾಟೀಲ್ ಹೇಳಿದರು.
ಅಯೋದ್ಯೆಯ ಸಂಧಾನ ವಿಚಾರ ಕುರಿತು ಮಾತನಾಡಿದ ಅವರು, ರಾಮ ಮಂದಿರ ವಿಚಾರದ ಕುರಿತು ನಾನು ಮಾಧ್ಯಮದಲ್ಲಿ ನೋಡಿದ್ದೇನೆ.

ಸಂಧಾನದ ಮೂಲಕ ಬಗೆ ಹರಿಸಿಕೊಳ್ಳಲು ತಿಳಿಸಿದ್ದಾರೆ. ಅದರ ಜಜ್ ಮೆಂಟ್ ಕಾಪಿ ಸಂಪೂರ್ಣ ನೋಡಿ ಪಕ್ಷ ನಿರ್ಣಯ ಮಾಡುತ್ತದೆ. ಪಕ್ಷದ ನಿರ್ಣಯ ನೋಡಿ ನನ್ನ ಬೆಂಬಲ್ ಕೂಡಾ ಅದಕ್ಕೆ ಇರುತ್ತದೆ ಎಂದರು.

ಎಚ್.ಡಿ.ರೇವಣ್ಣ ಅವರು ಗಂಡ ಸತ್ತು ತಿಂಗಳಾಗಿಲ್ಲ ಎಂದು ಸುಮಲತಾ ಅವರ ಕುರಿತು ಹಗುರವಾಗಿ ಮಾತನಾಡಿರುವುದಕ್ಕೆ ಅದನ್ನು ನಾನು ಗಮನಿಸಿಲ್ಲ, ಈ ಕುರಿತು ಯಾವುದೇ ಹೇಳಿಕೆ ನೀಡಲ್ಲ ಎಂದ ಗೃಹ ಸಚಿವ ಎಮ್.ಬಿ.ಪಾಟೀಲ್ ಹೇಳಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments