ಬೆಳಗಾವಿ ಮಹಿಳೆಯ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಪ್ರಕರಣವನ್ನು ರಾಜ್ಯ ಹೈಕೋರ್ಟ್, ಮಹಿಳಾ ದೌರ್ಜನ್ಯದ ಬಗ್ಗೆ ಸ್ವಯಂಕೃತವಾಗಿ ಸುಮೊಟೊ ಕೇಸ್ ದಾಖಲಿಸಿಕೊಂಡು ವಿಚಾರಣೆಯನ್ನು ಮಾಡಿದೆ.
ಈ ವೇಳೆ ನ್ಯಾಯಮೂರ್ತಿಗಳು ಎಲ್ಲ ಹಂತದಲ್ಲಿಯೂ ಮಹಿಳಾ ಗೌರವ ಎತ್ತಿಹಿಡಿಯುವ ಮೂಲಕ ನಾಡಿನ ಜನತೆಗೆ ನ್ಯಾಯಾಲಯದ ಮೇಲಿನ ಗೌರವವನ್ನೂ ಹೆಚ್ಚುವಂತೆ ಮಾಡಿದ್ದಾರೆ.