ಆರ್ ಟಿ ಇ ಅಡಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಸೀಟ್ ಸಿಗುತ್ತೆ. 1 ರಿಂದ 8 ನೇ ತರಗತಿವರೆಗೂ ಪೋಷಕರು ಹಣ ಕಟ್ಟುವಂತಿಲ್ಲ. ಮಕ್ಕಳ ವ್ಯಾಸಂಗದ ವೆಚ್ಚ ಸಂಪೂರ್ಣವಾಗಿ ಸರ್ಕಾರವೇ ಬರಿಸಬೇಕಾಗುತ್ತೆ. ಆದ್ರೆ ಈಗ ಕೆಲವೊಂದು ಖಾಸಗಿ ಶಾಲೆಯಲ್ಲಿ ಆರ್ ಟಿ ಇ ಸೀಟ್ ಕೊಡದೆ ತಾರತಮ್ಯ ಮಾಡುತ್ತಿದ್ದಾರೆ.1 ರಿಂದ 7 ನೇ ತರಗತಿವರೆಗೂ ಆರ್ ಟಿ ಇ ಅಡಿಯಲ್ಲಿ ಮಕ್ಕಳು ವ್ಯಾಸಂಗ ಮಾಡಿದ್ದು, ಆದ್ರೆ 8 ನೇ ತರಗತಿ ಮಕ್ಕಳಿಗೆ ಮಾತ್ರ ಆರ್ ಟಿ ಇ ಸೀಟ್ ಕೊಡದೆ ಶಾಲೆ ಆಡಳಿತ ಮಂಡಳಿ ತಾರತಮ್ಯ ಮಸಡುತ್ತಿದೆ.ಕೇವಲ ಬಿಲ್ಡಿಂಗ್ ಚೇಜ್ ಆಗಿರುವುದಕ್ಕೆ ಸಂಬಂಧವೇ ಇಲ್ಲದಂತೆ ಶಾಲೆಯ ಆಡಳಿತ ಮಂಡಳಿ ವರ್ತಿಸುತ್ತಿದೆ. ಅಷ್ಟೇ ಅಲ್ಲದೆ ವರ್ಷಕ್ಕೆ 36, ಸಾವಿರ ಹಣಕಟ್ಟಬೇಕೆಂದು ಶಾಲೆಯ ಆಡಳಿತ ಮಂಡಳಿ ಒತ್ತಾಯ ಮಾಡುತ್ತಿದೆ ಎಂದು ನೊಂದ ಪೋಷಕರು
ಬಿಇಒ ಆಫೀಸ್ ಗೆ ಕಂಪ್ಲೇಟ್ ಕೊಟ್ರು. ಇನ್ನೂ ಕಂಪ್ಲೇಟ್ ಸ್ವೀಕರಿಸಿದ ಯಲಹಂಕ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಎನ್ ಕಮಲಾಕರ ಸೋಮವಾರ ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ