Select Your Language

Notifications

webdunia
webdunia
webdunia
webdunia

ಮುರುಘಾ ಶ್ರೀಗಳ ಭವಿಷ್ಯ ನಿರ್ಧಾರ

ಮುರುಘಾ ಶ್ರೀಗಳ ಭವಿಷ್ಯ  ನಿರ್ಧಾರ
ಚಿತ್ರದುರ್ಗ , ಶುಕ್ರವಾರ, 23 ಸೆಪ್ಟಂಬರ್ 2022 (14:13 IST)
ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಮುರುಘ ಮಠದ ಡಾ.ಶಿವಮೂರ್ತಿ ಶರಣರ  ಜಾಮೀನು ಅರ್ಜಿ ಕುರಿತ ಆದೇಶ ಇಂದು ಹೊರಬೀಳಲಿದೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು ಆದೇಶ ಪ್ರಕಟಿಸಲಿದ್ದು, ಅದರಂತೆ ಶ್ರೀಗಳ ಭವಿಷ್ಯ ಇಂದು ನಿರ್ಧಾರಗಳ್ಳಲಿದೆ. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮರುಘಾಶ್ರೀ ಅವರು ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಆಂಜಿಯೋಗ್ರಾಮ್ ಬಳಿಕ ಶ್ರೀಗಳ ಬಿಪಿ, ಸ್ಯಾಚುರೇಶನ್ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಶ್ರೀಗಳ ಆರೋಗ್ಯದ ಬಗ್ಗೆ ನಿಗಾ ವಹಿಸಿರುವ ಹೃದಯ ತಜ್ಞ ಡಾ. ಮಹೇಶ್ ಮೂರ್ತಿ, ಡಾ. ಪರಮೇಶ್ವರ್ ಹೇಳಿದ್ದಾರೆ. ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣ ಹಿನ್ನೆಲೆ ಸಿಆರ್‌ಪಿಸಿ 91ರಡಿ ದಾಖಲೆ ಕೇಳಿದ್ದ ಎರಡು ಅರ್ಜಿಗಳು ವಜಾ ಮಾಡಲಾಗಿದೆ. ಎ4, ಎ5 ಪರ ವಕೀಲರು ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿ, ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಇಂದು ಶ್ರೀಗಳ ಜಾಮೀನು ಅರ್ಜಿ ತೀರ್ತು ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವತ್ಥ ನಾರಾಯಣ ರಾಜೀನಾಮೆಗೆ HDK ಆಗ್ರಹ