ಬೆಳಗಾವಿ : ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾಜಿ ಸಚಿವರೊಬ್ಬರು ತಮ್ಮ ಮೊಬೈಲ್ ನಲ್ಲಿ ಹುಡುಗಿಯ ಪೋಟೋ ವೀಕ್ಷಿಸಿದ್ದು ಇದೀಗ ಬಾರೀ ವಿವಾದಕ್ಕೆ ಕಾರಣವಾಗಿದೆ.
ಸದನದಲ್ಲಿ ಕಲಾಪದ ಆರಂಭದ ಹೊತ್ತಿನಲ್ಲಿ ಮಾಜಿ ಸಚಿವ, ಎನ್ ಮಹೇಶ್ ಅವರು ತಮ್ಮ ಮೊಬೈಲ್ ನಲ್ಲಿ ಹುಡುಗಿಯ ಪೋಟೋ ವೀಕ್ಷಿಸಿದ್ದಾರೆ. ಸದನದೊಳಗೆ ಸಚಿವರು ಮೊಬೈಲ್ ತೆಗೆದುಕೊಂಡು ಹೋಗಬಾರದಿತ್ತು. ಆದರೆ ಇದೀಗ ಅವರು ಕಲಾಪದ ವೇಳೆ ಹುಡುಗಿಯ ಪೋಟೋ ವೀಕ್ಷಿಸಿ ಬಾರೀ ವಿವಾದಕ್ಕೆ ಕಾರಣರಾಗಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ, ಎನ್ ಮಹೇಶ್ ಅವರು,’ ನಾನು ಮಗನಿಗೆ ಹೆಣ್ಣು ನೋಡುತ್ತಿದ್ದು. ನನ್ನ ಸ್ನೇಹಿತ ಶಿವಕುಮಾರ್ ಎಂಬುವವರು ಹುಡುಗಿ ಫೋಟೋ ಹಾಗೂ ಜಾತಕ ಕಳುಹಿಸಿಕೊಟ್ಟಿದ್ದರು. ಕುತೂಹಲದಿಂದ ನೋಡಿದೆ ಅಷ್ಟೇ' ಎಂದು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೇ 'ನಾನು ಸದನದೊಳಗೆ ಮೊಬೈಲ್ ತೆಗೆದುಕೊಂಡು ಹೋಗಬಾರದಿತ್ತು. ಆದರೆ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಖಾಲಿ ಇರುವ ಮಾಹಿತಿಯ ಮೆಸೇಜ್ ಗಾಗಿ ಕಾಯುತ್ತಿದ್ದೆ. ಆದ್ದರಿಂದ ಮೊಬೈಲ್ ತೆಗೆದುಕೊಂಡು ಹೋಗಬೇಕಾಯಿತು. ಇನ್ನುಮುಂದೆ ಆ ತಪ್ಪು ಮಾಡೋಲ್ಲ. ದಯವಿಟ್ಟು ಟಿವಿಗಳಲ್ಲಿ ಆ ಹೆಣ್ಣು ಮಗಳ ಚಿತ್ರ ತೋರಿಸಬೇಡಿ' ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.