Select Your Language

Notifications

webdunia
webdunia
webdunia
webdunia

ಮಹದಾಯಿ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ ಎಂದ ಕೂಡಲಸಂಗಮ ಶ್ರೀ

ಮಹದಾಯಿ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ ಎಂದ ಕೂಡಲಸಂಗಮ ಶ್ರೀ
ಹುಬ್ಬಳ್ಳಿ , ಶುಕ್ರವಾರ, 25 ಅಕ್ಟೋಬರ್ 2019 (14:28 IST)
ಕಳಸಾ-ಬಂಡೂರಿ, ಮಹದಾಯಿಗಾಗಿ ರಾಜ್ಯದ ಜನರು, ರೈತ ಹೋರಾಟಗಾರರು ಮಾಡಿದ ನಿರಂತರ ಹೋರಾಟಕ್ಕೆ ಇಂದು ಮೊದಲ ಜಯ ಸಿಕ್ಕಿದೆ.

ಹೀಗಂತ ಕೂಡಲಸಂಗಮ‌ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಕಳಸಾ - ಬಂಡೂರಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ್ದು ಸ್ವಾಗತರ್ಹವಾಗಿದೆ. ಇದು ರಾಜ್ಯದ ರೈತರ ಹೋರಾಟಕ್ಕೆ ಸಿಕ್ಕ‌ ಮೊದಲ ಜಯವಾಗಿದೆ ಎಂದಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದು, ಈ ವೇಳೆಯಲ್ಲಿ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಾ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಫಾಸ್ಟ್ ಫುಡ್ ಅಂಗಡಿ ಮುಚ್ಚಿ ಎಂದ ಪೊಲೀಸ್ ಪೇದೆಗೆ ಥಳಿಸಿದ ರೌಡಿಶೇಟರ್