ಬೆಂಗಳೂರು: ಸೋಮವಾರ ಅಬ್ಬರದ ಮೆರವಣಿಗೆ ನಂತರ ನಾಮಪತ್ರ ಸಲ್ಲಿಕೆ ಮಾಡಿದ್ದ ಬೆಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಇದು ಅಭಿವೃದ್ಧಿಯೆಡೆಗೆ ಮೊದಲ ಹೆಜ್ಜೆಯಿದು, ಬೆಂಬಲವಿರಲಿ ಎಂದು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಾಗರದಂತೆ ಸೇರಿದ್ದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳ ಜಯಘೋಷದ ನಡುವೆ ಹೆಜ್ಜೆ ಹಾಕುತ್ತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದೆ.
ಬದಲಾವಣೆಯ ಪಯಣಕ್ಕೆ ಹಿರಿಯರು, ಕಿರಿಯರೆನ್ನದೆ ಅಪಾರ ಸಂಖ್ಯೆಯಲ್ಲಿ ಆಗಮಿಸಿ, ಬೆಂಬಲಿಸಿದವರೆಲ್ಲರಿಗೂ ನಾನು ಆಭಾರಿ.
ಅಭಿವೃದ್ಧಿಯೆಡೆಗೆ ಮೊದಲ ಹೆಜ್ಜೆಯಿದು, ಈ ಸುದೀರ್ಘ ಪಯಣದಲ್ಲಿ ನಿಮ್ಮ ಬೆಂಬಲ ಸದಾ ನನ್ನೊಂದಿಗಿರಲಿ.
ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್, ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಶ್ರೀ ಎಂ. ಕೃಷ್ಣಪ್ಪ, ಶ್ರೀ ಆರ್.ವಿ. ದೇವರಾಜ್, ಶ್ರೀ ಪ್ರಿಯಾಕೃಷ್ಣ, ಶ್ರೀ ಯು.ಬಿ. ವೆಂಕಟೇಶ್, ಶ್ರೀ ಉಮಾಪತಿ ಗೌಡ, ಶ್ರೀ ರಘುನಾಥ್ ನಾಯ್ಡು, ಶ್ರೀ ಆರ್. ವಿ ಯುವರಾಜ್ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರ ಉಪಸ್ಥಿತಿ ನನ್ನ ವಿಶ್ವಾಸವನ್ನು ನೂರ್ಮಡಿಗೊಳಿಸಿತು.<>