ಯುವತಿಯ ವಿಚಾರಕ್ಕೆ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

Webdunia
ಶನಿವಾರ, 9 ಅಕ್ಟೋಬರ್ 2021 (20:48 IST)
ಬೆಂಗಳೂರು: ಯುವತಿಯ ವಿಚಾರಕ್ಕೆ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂವರು ಆರೋಪಿಗಳಾದ ನಯೀಮ್​​, ಮೋಹಿನ್, ವಸೀಮ್ ಎಂಬಾತನನ್ನು ಘಟನೆ ನಡೆದ 8 ಗಂಟೆಯೊಳಗೆ ಹೆಚ್​​​ಎಎಲ್​ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ಲಿಖಿತ್​​ ಮತ್ತು ಅರೋಪಿಗಳು ಎಲ್ಲರೂ ಒಂದೇ ಏರಿಯಾದವರು. ಯುವಕರ ಗುಂಪುಗಳ ನಡುವೆ ಹಣ ಮತ್ತು ಯುವತಿಯ ವಿಚಾರವಾಗಿ ಗಲಾಟೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಲಿಖಿತ್ ಈ ಮೊದಲು ಸಿದ್ದಿಕ್ ಎಂಬಾತನ ಬಳಿ ಸಾಲ ಪಡೆದಿದ್ದ. ಹಣ ವಾಪಸ್​ ಕೇಳಿದಾಗ ಕೊಡದೆ ಅವಾಚ್ಯ ಪದಗಳಿಂದ ನಿಂದಿಸಿದ್ದ. ಅಲ್ಲದೆ ಈ ಕುರಿತು ಮಾತನಾಡಲು ಆರೋಪಿಗಳಿಗೆ ಲಿಖಿತ್​ ಕರೆ ಮಾಡಿದ್ದ. ಇದಕ್ಕೆ ಆರೋಪಿಗಳು ಕೂಡ ಒಪ್ಪಿದ್ದರು. ಮಾತುಕತೆಗೆ ಬರುವಾಗ ಲಿಖಿತ್​​ ಜತೆ ನವೀನ್ ಮತ್ತು ಕದಿರೇಶ್ ಎಂಬುವರು ಬಂದಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಲಿಖಿತ್​​ನನ್ನು ಡ್ರ್ಯಾಗರ್​​ನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ: ನಯೀಮ್​​ ಮತ್ತು ಲಿಖಿತ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಯುವತಿ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಶುಕ್ರವಾರ ಸಂಜೆ 4 ಗಂಟೆಗೆ ಈ ವಿಚಾರದ ಕುರಿತು ಮಾತನಾಡಲು ನಯೀಮ್​ ನನ್ನು ಹೆಚ್‌ಎಎಲ್​​ನ ಲಾಲ್ ಬಹದ್ದೂರ್ ಶಾಸ್ತ್ರಿ ನಗರಕ್ಕೆ ಬರಲು ಲಿಖಿತ್ ಹೇಳಿದ್ದ. ಈ ವೇಳೆ ಯುವತಿ ವಿಚಾರವಾಗಿ ಇಬ್ಬರೂ ಮಾತುಕತೆ ಪ್ರಾರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು. ಬಳಿಕ ಡ್ರ್ಯಾಗರ್​ನಿಂದ ಲಿಖಿತ್​​​ಗೆ ಇರಿದು ಇಬ್ಬರು ಪರಾರಿಯಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಸ್ತೆ ಬಗ್ಗೆ ಪ್ರಶ್ನೆ ಕೇಳಿದ್ರೆ ಪತ್ರಕರ್ತರನ್ನೇ ಬಿಜೆಪಿಗೆ ಸೇರ್ಕೊಳ್ಳಿ ಎಂದ ಪ್ರದೀಪ್ ಈಶ್ವರ್ ವಿರುದ್ಧ ಭಾರೀ ಆಕ್ರೋಶ

ಎಸ್ ಎಲ್ ಭೈರಪ್ಪನವರಿಗೆ ನಾಳೆ ಅಂತಿಮ ವಿದಾಯ

Karnataka Weather: ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಇಂದು ಭಾರೀ ಮಳೆ ನಿರೀಕ್ಷೆ

ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಂತಹ ದುಃಖವಾಗಿದೆ: ಭೈರಪ್ಪ ನಿಧನಕ್ಕೆ ಭಗವಾನ್‌ ಸಂತಾಪ

ಮೇರು ಸಾಹಿತಿ ಭೈರಪ್ಪ ನಿಧನ: ಅಂತಿಮ ದರ್ಶನ, ಅಂತ್ಯಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments