Publish Date: Fri, 27 Mar 2020 (13:47 IST)
Updated Date: Fri, 27 Mar 2020 (13:51 IST)
ಮಹಾಮಾರಿ ಕೊರೊನಾಗೆ ರಾಜ್ಯದಲ್ಲಿ ಬಲಿಯಾಗಿರುವ ಮೂರನೇ ವ್ಯಕ್ತಿಗೆ ಮೂವರು ಪತ್ನಿಯರು ಹಾಗೂ 21 ಮಕ್ಕಳಿದ್ದಾರೆ.
ತುಮಕೂರಿನ ಸಿರಾ ನಗರದ 65 ವರ್ಷದ ವೃದ್ಧ ದೆಹಲಿಗೆ ಹೋಗಿ ಬಂದ ನಂತರ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಐಸೋಲೇಷನ್ ನಲ್ಲಿ ಚಿಕಿತ್ಸೆ ನಡೆಯುತ್ತಿದ್ದಾರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.
ಮೃತ ವೃದ್ಧನಿಗೆ ಮೂವರು ಪತ್ನಿಯರು ಹಾಗೂ 16 ಜನ ಮಕ್ಕಳು ಇದ್ದಾರೆ. ಕುಟುಂಬದ ಸದಸ್ಯರನ್ನೆಲ್ಲಾ ಐಸೋಲೇಷನ್ ವಾರ್ಡಿನಲ್ಲಿಟ್ಟು ನಿಗಾ ವಹಿಸಲಾಗಿದೆ.
ವೈದ್ಯನಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ ವೈದ್ಯರಿಬ್ಬರು ಹಾಗೂ ಜಿಲ್ಲಾಸ್ಪತ್ರೆಯ ಓರ್ವ ವೈದ್ಯರು ಸೇರಿ ನರ್ಸಗಳನ್ನೂ ಸಹ ಹೋಂ ಕ್ವಾರಂಟೈನ್ ನಲ್ಲಿಟ್ಟು ನಿಗಾ ವಹಿಸಲಾಗಿದೆ.