Webdunia - Bharat's app for daily news and videos

Install App

​ಕಾರಿನಲ್ಲಿ ಅನಾಥವಾಗಿತ್ತು ಶವ

Webdunia
ಮಂಗಳವಾರ, 28 ಡಿಸೆಂಬರ್ 2021 (20:32 IST)
Photo Courtesy: Google
ಎರಡು ತಿಂಗಳ ಹಿಂದೆ ಕಂಪನಿ ಕ್ಲೋಸ್ ಮಾಡಿದ್ದ ವ್ಯಕ್ತಿಯ ಬದುಕು ಕೂಡ ಇದೀಗ ಅಂತ್ಯವಾಗಿದ್ದು, ಎಸ್ಟೀಮ್​ ಕಾರಿನಲ್ಲಿ ಶವ ಅನಾಥವಾಗಿರುವುದು ಕಂಡುಬಂದಿದೆ. ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆಯಾಗಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರ ರಸ್ತೆಯಲ್ಲಿ ಈ ಶವ ಪತ್ತೆಯಾಗಿದೆ.
ಶವ ಕಂಡುಬಂದಿರುವ ಮಾರುತಿ ಎಸ್ಟೀಮ್​ ಕಾರಿನ ಎಲ್ಲ ಗ್ಲಾಸ್​ ಕ್ಲೋಸ್ ಆಗಿದ್ದು, ಸಾವಿಗೀಡಾದ ವ್ಯಕ್ತಿ ಬೆಂಗಳೂರಿನ ಡೇರಿ ಸರ್ಕಲ್​ ನಿವಾಸಿ ಪಾರ್ಥಸಾರಥಿ ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಈ ವ್ಯಕ್ತಿ ಬೇಸರದಲ್ಲಿ ಗದ್ಗದಿತರಾಗಿ ತಮಿಳಿನಲ್ಲಿ ಮಾತನಾಡುತ್ತ ನೋವು ತೋಡಿಕೊಂಡ ವಿಡಿಯೋ ತುಣುಕುಗಳು ಕೂಡ ಲಭಿಸಿವೆ.
ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಯೊಂದನ್ನು ಹೊಂದಿದ್ದ ಇವರು ನಷ್ಟದಿಂದಾಗಿ ಎರಡು ತಿಂಗಳ ಹಿಂದೆ ಅದನ್ನು ಕ್ಲೋಸ್ ಮಾಡಿದ್ದರು. ಅವರ ಶವ ಕಾರಿನ ಡ್ರೈವರ್ ಸೀಟ್​ನಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಿನಲ್ಲಿ ಮದ್ಯ ಹಾಗೂ ನೀರಿನ ಬಾಟಲಿ ಪತ್ತೆಯಾಗಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹಾಮಳೆಗೆ ಮುಂಬೈ ತತ್ತರ: ಜನಜೀವನ ಅಸ್ತವ್ಯಸ್ತ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಧರ್ಮಸ್ಥಳ ಮಾಸ್ಕ್ ಮ್ಯಾನ್ ಮುಖವಾಡ ಕಳಚಿಬಿತ್ತು: ಇಷ್ಟು ದಿನದ ಶೋಧಕ್ಕೆ ಬಿಗ್ ಟ್ವಿಸ್ಟ್

ಧರ್ಮಸ್ಥಳ ಕೇಸ್ ಗೆ ಮಹತ್ವದ ತಿರುವು: ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಾಧ್ಯತೆ

ಧರ್ಮಸ್ಥಳ ಗೊಂದಲಕ್ಕೆ ಇಂದೇ ತೆರೆ: ವಿಜಯೇಂದ್ರ ವಿಶ್ವಾಸ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಹೃದಯಾಘಾತ ತಡೆಯಲು ಮೂರು ಪರೀಕ್ಷೆಗಳು ಕಡ್ಡಾಯ

ಮುಂದಿನ ಸುದ್ದಿ
Show comments