Select Your Language

Notifications

webdunia
webdunia
webdunia
webdunia

ಕೊರೋನಾ ವಾರಿಯರ್ಸ್ ಮಾಡಿದ್ರು ಮನಮೆಚ್ಚುವ ಕೆಲಸ

ಕೊರೋನಾ ವಾರಿಯರ್ಸ್ ಮಾಡಿದ್ರು ಮನಮೆಚ್ಚುವ ಕೆಲಸ
ಕಲಬುರಗಿ , ಭಾನುವಾರ, 12 ಏಪ್ರಿಲ್ 2020 (16:27 IST)
ಕೊರೊನಾ ಸೈನಿಕರು ಮನಮುಟ್ಟುವ ಕೆಲಸ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೋವಿಡ್ -19 ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸ್ (ಸೈನಿಕರು) ಮಾನವೀಯತೆ ಮೆರೆದಿದ್ದಾರೆ.  ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ತುರ್ತಾಗಿ ಬೇಕಾಗಿದ್ದ ಮಾತ್ರೆಗೆ ಸಹಾಯ ಹಸ್ತ ನೀಡಿದ್ದಾರೆ.

ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದ ಶಿವಶರಣ ಎಂಬ ರೋಗಿಗೆ ಪ್ರತಿ ತಿಂಗಳು ಸೇವಿಸಬೇಕಾದ ಮಾತ್ರೆಗಳನ್ನು ತಮ್ಮ ಸ್ವಂತ ವಾಹನದಲ್ಲಿ ಕಲಬುರಗಿಯಿಂದ ಹುಮನಾಬಾದ್ ಗೆ ಕೊರೋನಾ ಸೈನಿಕರಾದ ಹರ್ಷಲ್ ಹಾಗೂ ಸಂದೀಪ್ ಹೋಗಿ ತಲುಪಿಸಿದ್ದಾರೆ.

ಜೈ ಲಕ್ಷ್ಮೀ ಟ್ರಾನ್ಸಪೋರ್ಟ್‍ನವರಿಗೆ ಕರೆ ಮಾಡಿ ಕೇಳಿದಾಗ ಮಾತ್ರೆಗಳು ಬೆಂಗಳೂರಿನಿಂದ ಕಲಬುರಗಿವರೆಗೆ ಮಾತ್ರ ವಾಹನಗಳು ಬರಲು ಸಾಧ್ಯ , ಬೀದರವರೆಗೆ ಬರಲು ಸಾಧ್ಯವಿಲ್ಲ ವಾಹನಗಳನ್ನು ಬಿಡುತ್ತಿಲ್ಲ ಎಂದು ತಿಳಿಸಿದರು. ಆಗ ಕಲಬುರಗಿ ಕೊರೋನಾ ಸೈನಿಕರಾದ ಹರ್ಷಲ್ ಮತ್ತು ಸಂದೀಪ ಸದರಿ ಟ್ರಾನ್ಸಪೋರ್ಟ್ ಕಚೇರಿಗೆ ಭೇಟಿ ನೀಡಿ ಮಾತ್ರೆಗಳನ್ನು ಪಡೆದು ತಮ್ಮ ಸ್ವಂತ ವಾಹನದಲ್ಲಿ ಹೋಗಿ ಶಿವಶರಣಪ್ಪ ಅವರ ಮನೆಗೆ ತಲುಪಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಯಲ್ಲಿ ಮತ್ತೆರಡು ಕೊರೋನಾ ಪಾಸಿಟಿವ್ ಕೇಸ್ ಪತ್ತೆ