Publish Date: Sun, 05 Jan 2020 (16:49 IST)
Updated Date: Sun, 05 Jan 2020 (16:51 IST)
ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ಮುಖಂಡರಲ್ಲಿ ಯಾವುದೇ ರೀತಿಯ ಭೇದ ಇಲ್ಲ.
ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸೆ ಕಾಂಗ್ರೆಸ್ಸಿಗರು ಅನ್ನೋ ಮಾತೇ ಇಲ್ಲ. ಹೀಗಂತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಗೊಂದಲವಿಲ್ಲ. ಭೇದ ಇಲ್ಲವೇ ಇಲ್ಲ ಎಂದಿರೋ ಅವರು, ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮಾಡಿದೋರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಂದು ಕೂಡಲಿದ್ದಾರೆ ಎಂದಿದ್ದಾರೆ.