Select Your Language

Notifications

webdunia
webdunia
webdunia
Friday, 4 April 2025
webdunia

ಸಿಲಿಕಾನ್ ಸಿಟಿ ಪೊಲೀಸರಿಗೆ ಎಚ್ಚರಿಕೆಯ ಸೈರನ್ ಕೊಟ್ಟ ಕಮೀಷನರ್

ಸಿಲಿಕಾನ್ ಸಿಟಿ ಪೊಲೀಸರಿಗೆ ಎಚ್ಚರಿಕೆಯ ಸೈರನ್ ಕೊಟ್ಟ ಕಮೀಷನರ್
bangalore , ಸೋಮವಾರ, 26 ಡಿಸೆಂಬರ್ 2022 (18:46 IST)
ಕಳೆದ ಎರಡು ವರ್ಷಗಳಿಂದ ಕರೋನಾದಿಂದ  ಹೊಸ ವರ್ಷಾಚರಣೆ ಕಳೆಗುಂದಿತ್ತು ಈ  ಬಾರಿ ದೇಶದ ಬಹುತೇಕ ರಾಜ್ಯಗಳಲ್ಲಿ 
 ಹೊಸ ವರ್ಷದ ಸಂಭ್ರಮಾಚರಣೆಗೆ ಸಾಕಷ್ಟು ಪ್ಲಾನ್ ಮಾಡಿಕೊಂಡಿದ್ದಾರೆ.ಆದ್ರೆ ಒಂದು ಕಡೆ ಮತ್ತೆ ಕರೋನಾದ ಕರಿಚಾಯೇ ಆವರಿಸುತ್ತಿದೆ ಮತ್ತೊಂದು ಕಡೆ ಉಗ್ರರ ವಿಧ್ವಾಂಸಕ ಕೃತ್ಯಗಳ ಬಗ್ಗೆ ಕೂಡ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ  ಹೊಸ ವರ್ಷ ಆಚರಣೆಗೆ ಅಡ್ಡಿಯಾಗಿದ್ದ ಕರೋನಾ ಈ ಬಾರಿ ಸ್ವಲ್ಪ ಬಿಡುವು ಕೊಟ್ಟಿತ್ತು. ಇದರಿಂದ ನ್ಯೂ ಇಯಾರ್ನ ಹೊಸ ರೀತಿಯಲ್ಲಿ ಬರಮಾಡಿಕೊಳ್ಳಲು ಆದ್ರೇ ದೇಶದ ಮಂಗಳೂರು ಹಾಗೂ ಕೊಯಮತ್ತೂರಿನಲ್ಲಿ ಸಂಭವಿಸಿ ಬಾಂಬ್ ಬ್ಲಾಸ್ಟ್ ಪ್ರಕಣದಿಂದ‌ ಗುಪ್ತಚರ ಇಲಾಖೆ ಕೂಡ ತಲೆಕೆಡಿಕೊಂಡು ಉಗ್ರರ ಸಂಚನ್ನ ಹತ್ತಿಕೀವೆ. ಆದ್ರೆ ಇಂತಹ ಟೈಮ್ನಲ್ಲಿ   ಭಯೋತ್ಪಾದಕ ಕೃತ್ಯಗಳಿಗೆ ಸಂಚಿನ ಶಂಕೆ  ಹಿನ್ನೆಲೆ  ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ 'ಕೇಂದ್ರ ತನಿಖಾ ಸಂಸ್ಥೆಗಳಿಂದ ಯಾವುದೇ ಎಚ್ಚರಿಕೆ ಬಂದಿಲ್ಲ, ಆದರೂ ಸಹ ನಗರದಲ್ಲಿ ಪೊಲೀಸರಿಗೆ ಸೂಕ್ತ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ' ಎಂದ್ರು. ಯಾವುದೇ ಪ್ರತ್ಯೇಕ ಎಚ್ಚರಿಕೆ ಬಂದಿಲ್ಲ ಆದರೂ ಸಹ ಕಳೆದ ಮೂರು ತಿಂಗಳ ಅವಧಿಯಲ್ಲಿ ಮಂಗಳೂರು ಹಾಗೂ ಕೊಯಮತ್ತೂರಿನಲ್ಲಿ ನಡೆದಿರುವ ಬಾಂಬ್ ಸ್ಪೋಟ ಪ್ರಕರಣಗಳು ಕಣ್ಮುಂದೆ ಇರುವುದರಿಂದ ಬೆಂಗಳೂರು ಪೊಲೀಸರಿಗೆ ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

8ನೇ ದಿನಕ್ಕೆ ಕಾಲಿಟ್ಟ ಎನ್,ಪಿ,ಎಸ್ ನೌಕರರ ಪ್ರತಿಭಟನೆ