Select Your Language

Notifications

webdunia
webdunia
webdunia
webdunia

ಸಮ್ಮಿಶ್ರ ಸರ್ಕಾರ ಅನ್ನೋದು ಎಲ್‍ ಓಸಿ ಇದ್ದಂಗೆ. ಯಾವಾಗಲು ನಾವು ಅಲರ್ಟ್ ಆಗಿರಬೇಕು - ಸತೀಶ್ ಜಾರಕಿಹೊಳಿ

ಸಮ್ಮಿಶ್ರ ಸರ್ಕಾರ ಅನ್ನೋದು ಎಲ್‍ ಓಸಿ ಇದ್ದಂಗೆ. ಯಾವಾಗಲು ನಾವು ಅಲರ್ಟ್ ಆಗಿರಬೇಕು - ಸತೀಶ್ ಜಾರಕಿಹೊಳಿ
ಬೆಳಗಾವಿ , ಭಾನುವಾರ, 27 ಜನವರಿ 2019 (14:47 IST)
ಬೆಳಗಾವಿ : ಆಪರೇಷನ್ ಕಮಲದ ವಿಚಾರಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರ ಅನ್ನೋದು ಎಲ್‍ ಓಸಿ ಇದ್ದಂಗೆ. ಯಾವಾಗಲು ನಾವು ಅಲರ್ಟ್ ಆಗಿರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.


‘ಇನ್ನು ನಾಲ್ಕು ವರ್ಷ ಮೂರು ತಿಂಗಳು ಬಿಜೆಪಿ ಆಪರೇಷನ್ ಕಮಲ ಮಾಡುತ್ತಲೇ ಇರುತ್ತದೆ. ಸಮ್ಮಿಶ್ರ ಸರ್ಕಾರ ಅನ್ನೋದು ಎಲ್‍ ಓಸಿ ಇದ್ದಂಗೆ. ಯಾವಾಗಲು ನಾವು ಅಲರ್ಟ್ ಆಗಿರಬೇಕು. ಇಲ್ಲದಿದ್ರೆ ನಮ್ಮ ಮೇಲೆ ಫೈರ್ ಮಾಡಿ ಬಿಡುತ್ತಾರೆ’ ಎಂದು ರಾಜಕೀಯವನ್ನು ಯುದ್ಧಭೂಮಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ.


ಶಾಸಕ ಗಣೇಶ್ ಮತ್ತು ಆನಂದ್ ಸಿಂಗ್ ಗಲಾಟೆ ವಿಚಾರವಾಗಿ ಮಾತನಾಡಿದ ಸಚಿವರು, ‘ಕೇವಲ ಒಂದು ದಿನ ಈಗಲಟನ್ ರೆಸಾರ್ಟ್ ನಲ್ಲಿ ನಾನಿದ್ದೆ. ಮರುದಿನ ನೀವು ಇಲ್ಲಿರೋದು ಅವಶ್ಯಕತೆ ಇಲ್ಲ ಎಂದು ಪಕ್ಷದ ಹಿರಿಯರು ನಮ್ಮನ್ನು ಕಳುಹಿಸಿದರು. ಮರುದಿನ ಗಲಾಟೆ ನಡೆದಿದ್ದರಿಂದ ಹೆಚ್ಚಿನ ಮಾಹಿತಿ ನನಗಿಲ್ಲ. ಗಲಾಟೆಗೂ ಮುನ್ನ ಅಲ್ಲಿ ಸಂದರ್ಭ ಏನಿತ್ತು? ಎಂಬುದರ ಬಗ್ಗೆ ಗೊತ್ತಿಲ್ಲ. ಕೆಲವೊಂದು ಬಾರಿ ಈ ರೀತಿಯ ಘಟನೆಗಳು ನಡೆಯುತ್ತವೆ. ಆರಂಭದಲ್ಲಿ ಶಾಸಕ ಗಣೇಶ್ ವಿರುದ್ಧ ಯಾರು ದೂರು ದಾಖಲಿಸಿರಲಿಲ್ಲ. ಇದೀಗ ದೂರು ದಾಖಲಾಗಿದ್ದು, ಪೊಲೀಸರು ಶಾಸಕರನ್ನು ಹುಡುಕುತ್ತಿದ್ದಾರೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮ ನೀಡಿದ ಮಕ್ಕಳಿಗೆ ವಿಷ ನೀಡಿ ತಾಯಿ ಆತ್ಮಹತ್ಯೆ