ಆಡಳಿತ ನಿರ್ವಹಣೆಯಲ್ಲಿ ನಿಮ್ಮ ನಿರ್ಣಯ ಬಳ ಮುಖ್ಯ.  ಸಮಯೋಚಿತ ತೀರ್ಮಾನಗಳ ಮೂಲಕ ಜನರಿಗೆ ನೆರವಾಗಿ ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
 
 			
 
 			
			                     
							
							
			        							
								
																	
	 
	ಇಂದು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನೀವು ಆಡಳಿತದ ಭಾಗವಾಗಿದ್ದೀರಿ ನಿಮಗೆ ಹೆಚ್ಚಿನ ಅಧಿಕಾರವಿದೆ. ಆಳುವುದು ಬೇರೆ. ಆಡಳಿತ ಮಾಡುವುದು ಬೇರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕು.  ಆಡಳಿತ ನಿರ್ವಹಣೆಯಲ್ಲಿ ನಿಮ್ಮ ನಿರ್ಣಯ ಬಳ ಮುಖ್ಯ.  ಸಮಸ್ಯೆಗಳಿದ್ದರೇ ಹಿರಿಯ ಅಧಿಕಾರಿಗಳ ಸಲಹೆ ಪಡೆಯಿರಿ ಎಂದರು.
	 
	ಎಲ್ಲಾ ಡಿಸಿಗಳು ಮುಕ್ತವಾಗಿ ತಮ್ಮ ಅನುಭವ ಹಂಚಿಕೊಳ್ಳಬೇಕು. ಆಗ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯ.  ಬಜೆಟ್ ಅನುಷ್ಟಾನ ಕುರಿತಂತೆ ಸರ್ಕಾರದ ಆದೇಶ ಆಗಿದೆ. ತಳಹಂತದಲ್ಲಿ ಅವುಗಳ ಅನುಷ್ಟಾನಕ್ಕೆ ಕ್ರಮ ಕೈಗೊಂಡು ವರ್ಷಾಂತ್ಯದಲ್ಲಿ ಗುರಿ ಸಾಧಿಸಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.