ರಸ್ತೆ ಗುಂಡಿ ವಿಚಾರವಾಗಿ ಹೈಕೋರ್ಟ್ ಮುಂದೆ ಪಾಲಿಕೆ ಮುಖ್ಯ ಆಯುಕ್ತರು ಹಾಜರಾಗಿ ನ್ಯಾಯಾಲಯದ ಮುಂದೆ ನಮ್ಮ ಬಳಿ ಇರುವ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದ್ದಾರೆ. ಹಲವು ಕಾರಣಗಳಿಂದ ಕಾರ್ಯಾದೇಶ ಮಾಡಲು ಸಾಧ್ಯ ಆಗಿರಲಿಲ್ಲ, ಪೈಥಾನ್ ಸಂಸ್ಥೆ ಜೊತೆ ದರದ ಬಗ್ಗೆ ಮಾತುಕತೆ ನಡೀತಿತ್ತು, ಹೀಗಾಗಿ ತಡವಾಗಿದೆ, ನಿನ್ನೆ ಪೈಥಾನ್ ಬಳಸಿ ರಸ್ತೆ ಗುಂಡಿ ಮುಚ್ಚುವ ಬಗ್ಗೆ ಕಾರ್ಯಾದೇಶ ಮಾಡಲಾಗಿದೆ. ಲಿಖಿತ ರೂಪದಲ್ಲಿ ಇನ್ನೂ ಕೋರ್ಟ್ ನಾವು ಮಾಹಿತಿ ಕೊಟ್ಟಿಲ್ಲ,10 ದಿನಗಳ ಒಳಗಾಗಿ ಮಾಹಿತಿ ಡಾಕ್ಯುಮೆಂಟ್ ಮಾಡಿ ಕೊಡುತ್ತೇವೆ.1,344 km ಮುಖ್ಯ ರಸ್ತೆ ಪೈಕಿ 576 km ರಸ್ತೆ ಗುಂಡಿ ಮುಚ್ಚಲು ಪೈಥಾನ್ ಗೆ ಆದೇಶ ಮಾಡಲಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಆದಷ್ಟು ಬೇಗ ಗುಂಡಿ ಮುಚ್ಚುತ್ತೇವೆ,ಜುಲೈ 27ಕ್ಕೆ ಮತ್ತೆ ಬರುವಂತೆ ಹೇಳಿ ಕಳುಹಿಸಿದ್ದಾರೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.