ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಕುರಿತಾಗಿ ವಿಚಾರಣೆಯನ್ನು ನಡೆಸಿರುವ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಇದರಿಂದ ತಿಹಾರ್ ಜೈಲು ಪಾಲಾಗಬೇಕಿದ್ದ ಚಿದಂಬರಂಗೆ ಕೊಂಚ ರಿಲೀಪ್ ಸಿಕ್ಕಂತಾಗಿದೆ.
ಐಎನ್‍ಎಕ್ಸ್ ಮೀಡಿಯಾ ಹಗರಣದ ಕೇಸ್ ನ ಆರೋಪಿಯಾಗಿರೋ ಕೇಂದ್ರದ ಮಾಜಿ ಸಚಿವರಾಗಿರೋ ಪಿ.ಚಿದಂಬರಂಗೆ ಸುಪ್ರೀಂ ಕೋರ್ಟ್ ನೀಡಿರುವಂಥ ತೀರ್ಪು ಸ್ವಲ್ಪ ಸಮಾಧಾನ ತಂದಂತಿದೆ.
ತಿಹಾರ್ ಜೈಲಿಗೆ ಚಿದಂಬರಂ ಅವರನ್ನು ಕಳಿಸಬಾರದು ಹಾಗೂ ಸಿಬಿಐ ಕೇಂದ್ರ ಕಚೇರಿಯಲ್ಲೇ ಇರಿಸಿಕೊಳ್ಳುವಂತೆ ಕೋರ್ಟ್ ತಿಳಿಸಿದೆ. ಜಾಮೀನು ಅರ್ಜಿಯನ್ನು ಪರಿಗಣಿಸುವಂತೆಯೂ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ನೀಡಿದೆ.