Select Your Language

Notifications

webdunia
webdunia
webdunia
webdunia

ಬಿಟ್ ಕಾಯಿನ್ ಪ್ರಕರಣ; SITಯಿಂದ ತನಿಖೆ

ಬಿಟ್ ಕಾಯಿನ್ ಪ್ರಕರಣ; SITಯಿಂದ ತನಿಖೆ
bangalore , ಶುಕ್ರವಾರ, 11 ಆಗಸ್ಟ್ 2023 (19:00 IST)
ಬಿಟ್ ಕಾಯಿನ್ ಪ್ರಕರಣವನ್ನು SIT ತನಿಖೆಗೆ ಒಳಪಡಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಹೊಸದಾಗಿ ಹಿಂದಿನ CCB ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ. SIT DySP ಪಿ.ಕೆ.ರವಿಶಂಕರ್ ಅವರು ಬೆಂಗಳೂರು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. 2 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಹಾಗೂ ಆ್ಯಪ್ ಮ್ಯಾಕ್ ಬುಕ್​ನಲ್ಲಿ ಮೂಲ ಫೈಲ್​ಗಳನ್ನ ಅಳಿಸಲಾಗಿದೆ. ಅದೇ ಸ್ಥಳದಲ್ಲಿ ಹೆಚ್ಚುವರಿಯಾಗಿ ಫೈಲ್​ಗಳನ್ನ ಸೃಷ್ಟಿಸಲಾಗಿದೆ. ಗಮನಾರ್ಹವೆಂದರೆ ಪ್ರಕರಣದ ತನಿಖೆಯನ್ನ CCB ಕೈಗೆತ್ತಿಕೊಂಡ ಬಳಿಕವೇ ಸಾಕ್ಷ್ಯಗಳನ್ನ ತಿರುಚಲಾಗಿದೆ. ಸೆಪ್ಬಂಬರ್ 9, 2020ರಿಂದ ಡಿಸೆಂಬರ್ 16, 2020ರ ಅವಧಿಯಲ್ಲಿ CCB ಕಚೇರಿ ಹಾಗು ಇತರೆಡೆ ಈ ಅಕ್ರಮ ನಡೆದಿದೆ. CCB ತನಿಖಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಒಳಸಂಚು ರೂಪಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಡಿಜಿಟಲ್ ಉಪಕರಣಗಳಲ್ಲಿ ಹೆಚ್ಚುವರಿಯಾಗಿ ಫೈಲ್ ಸೃಷ್ಟಿಸಿದ್ದಾರೆ ಅಂತಾ SIT DySPಯಿಂದ ದೂರು ದಾಖಲಾಗಿದೆ. ಹಿಂದಿನ CCB ತನಿಖಾಧಿಕಾರಿಗಳು ಹಾಗೂ ಇತರರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ-ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ