Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಮಲಗಿದ್ದ ಬಾಲಕ ನಾಪತ್ತೆ..!

crime news

geetha

ಬೆಂಗಳೂರು , ಶುಕ್ರವಾರ, 9 ಫೆಬ್ರವರಿ 2024 (19:01 IST)
ಬೆಂಗಳೂರು : ಸಿದ್ದರಾಮಪ್ಪ ಎಂಬ ಐದು ವರ್ಷದ ಬಾಲಕ ಜ.24 ರಂದು ಸಂಜೆ ಹಠಾತ್ತನೆ ಕಣ್ಮರೆಯಾಗಿದ್ದ. ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಭೀಮಪ್ಪ -ತಾರಮ್ಮ ದಂಪತಿಗಳು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದರೂ ಇದುವರೆಗೂ ಪತ್ತೆಯಾಗಿಲ್ಲ. ರಾಮನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಗನಿಗಾಗಿ ಹಂಬಲಿಸುತ್ತಿರುವ ದಂಪತಿಗಳು ನಿತ್ಯ ಕಣ್ಣೀರು ಹಾಕುತ್ತಿದ್ದಾರೆ.

ಈ ಕುರಿತು ದೂರು ದಾಖಲಾಗಿ 15 ದಿನಗಳೇ ಕಳೆದಿದ್ದರೂ ಇದುವರೆಗೂ ಬಾಲಕನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬಾಲಕನ ಪತ್ತೆ ಅಥವಾ ಸುಳಿವು ಸಿಕ್ಕಿದಲ್ಲಿ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮನೆತುಂಬಾ ಮಕ್ಕಳು ಮಾಡ್ಕೊಳಿ ಎಂದ ಪ್ರಧಾನಿ