Publish Date: Tue, 19 Oct 2021 (22:19 IST)
Updated Date: Tue, 19 Oct 2021 (22:21 IST)
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸಂಪ್ನೊಳಗೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ನಗರದ ಹೆಚ್ ಬಿ ಆರ್ ಲೇಔಟ್ನಲ್ಲಿ ನಡೆದಿದೆ.
ನಗರದಲ್ಲಿ ಸತತ ಮಳೆಯಿಂದಾಗಿ ನಿರ್ಮಾಣ ಹಂತದ ಕಟ್ಟದ ತಳ ಮಹಡಿಯಲ್ಲಿರುವ ಸಂಪ್ನಲ್ಲಿ ಭಾರಿ ಪ್ರಮಾಣದಲ್ಲಿ ನೀರಿತ್ತು. ಇದೇ ಕಟ್ಟಡದ ಮುಂದೆ ಮೈದಾನ ಇದ್ದು, ಮಕ್ಕಳು ಆಟ ಆಡುವಾಗ ಚೆಂಡು ಒಳಗಡೆ ಬಿದ್ದಿತ್ತು. ಚೆಂಡನ್ನು ತರಲು ಇಬ್ಬರು ಬಾಲಕರು ಹೋದಾಗ ಓರ್ವ ಮೃತಪಟ್ಟಿದ್ದಾನೆ. ಇನ್ನೋರ್ವ ಬಾಲಕನಿಗಾಗಿ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸದ್ಯ ಮೃತ ಬಾಲಕನ ಶವವನ್ನು ಸ್ಥಳೀಯರೇ ಹೊರ ತೆಗೆದಿದ್ದಾರೆ. ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಾಗಿದೆ.