ಸುಪ್ರೀಂ ಕೋರ್ಟ್ ಅಂಗಳಕ್ಕೆ ಚೆಂಡು: 24 ಗಂಟೆಯಲ್ಲೇ ವಿಶ್ವಾಸಮತಕ್ಕೆ ಬಿಜೆಪಿ ಬಿಗಿಪಟ್ಟು

ಗುರುವಾರ, 18 ಜುಲೈ 2019 (19:00 IST)
ವಿಧಾನಸಭೆ ಕಲಾಪ ಮುಂದೂಡಿಕೆ ಆಗಿರೋ ಹಿನ್ನೆಲೆಯಲ್ಲಿ ಬಿಜೆಪಿ ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಿದ್ಧತೆ ಆರಂಭಿಸಿದೆ.

2018 ರಲ್ಲಿ ನ್ಯಾ. ಸಿಕ್ರಿ ಕೊಟ್ಟ ತೀರ್ಪಿನಂತೆ ಈಗಲೂ 24 ಗಂಟೆಗಳಲ್ಲೇ ರಾಜ್ಯದಲ್ಲಿಯೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಬೇಕು ಅಂತ ನಿರ್ದೇಶನ ನೀಡುವಂತೆ ಬಿಜೆಪಿ ಕೋರ್ಟ್ ಮೆಟ್ಟಿಲೇರಲಿದೆ.

ಈ ನಡುವೆ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಗಳಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ. ಇನ್ನೊಂದೆಡೆ ವಿಪ್ ಬಗ್ಗೆ ಗೊಂದಲ ಇರೋದರಿಂದ ಸ್ಪೀಕರ್ ಕೂಡ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ರಾಜ್ಯದ ರಾಜಕೀಯ ಸುಪ್ರೀಂ ಕೋರ್ಟ್ ಅಂಗಳಕ್ಕೆ ಮತ್ತೆ ತಲುಪಿದಂತಾಗಿದ್ದು, ರಾಜಕೀಯ ಪ್ರಸಹನ ಮುಂದುವರಿದಂತಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ-ಮೈತ್ರಿ ಪಕ್ಷ ಬಿಗ್ ಫೈಟ್ ; ಕಲಾಪ ಮುಂದೂಡಿಕೆ