Webdunia - Bharat's app for daily news and videos

Install App

ಅಬ್ಬಬ್ಬಾ..! ಬನ್ನೇರುಘಟ್ಟ ಪಾರ್ಕ್ನಲ್ಲಿ ಎಷ್ಟೊಂದು ವೆರೈಟಿಯ ಅಪರೂಪದ ಹಾವುಗಳು Abbotta ..!

Webdunia
ಮಂಗಳವಾರ, 20 ಜುಲೈ 2021 (15:51 IST)
ಬೆಂಗಳೂರು(ಜು.20): ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವೈವಿಧ್ಯಮಯ ಪ್ರಾಣಿಗಳಿವೆ. ಅಲ್ಲಿರುವ ಪ್ರಾಣಿಗಳು ಹಾಗೂ ಪ್ರಾಣಿ ಪ್ರಭೇದಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.  ಪ್ರಾಣಿ ಪ್ರಿಯರಿಗೆ ತಮ್ಮ ನೆಚ್ಚಿನ ಪ್ರಾಣಿಗಳ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟಂತಹ ತಜ್ಞರಿಂದ ತಿಳಿದುಕೊಳ್ಳಲು, ಅವರೊಂದಿಗೆ ಮಾತಾಡಲು ಮತ್ತು ಆ ಪಾರ್ಕಿನ ಮಾರ್ಗದರ್ಶಿ ಪ್ರವಾಸವನ್ನು ಹೋಗುವಂತಹ ಅವಕಾಶವನ್ನು ಬನ್ನೇರುಘಟ್ಟ ಉದ್ಯಾನವನ ಕಲ್ಪಿಸಿ ಕೊಡುತ್ತಲೇ ಬಂದಿದೆ.

ಮೊನ್ನೆ ಅಂದರೆ ಜುಲೈ 16 ರಂದು ವಿಶ್ವ ಹಾವು ದಿನಾಚರಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಪರೂಪದ ಹಾವುಗಳ ಪ್ರಭೇದಗಳನ್ನು ಪ್ರದರ್ಶಿಸಲು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿರುವಂತಹ ಬೆಂಗಳೂರು ಮೃಗಾಲಯದಲ್ಲಿನ ರೆಪ್ಟೈಲ್ ಪಾರ್ಕ್ ನಲ್ಲಿ ಹಾವುಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ವಿಶ್ವ ಹಾವು ದಿನಾಚರಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿದ್ದ ಅಪರೂಪದ ಹಾವುಗಳಪ್ರಭೇದಗಳ ಪ್ರದರ್ಶನದಲ್ಲಿಆರು ವಿಭಿನ್ನ ಪ್ರಭೇದದ ಹಾವುಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ವಿಷಕಾರಿ ಹಾವುಗಳೆಂದೇ ಗುರುತಿಸಿರುವ ಕಿಂಗ್ ಕೋಬ್ರಾ, ಸ್ಪೆಕ್ಟಾಕಲ್ಡ್ ಕೋಬ್ರಾ ಮತ್ತು ರಸ್ಸೆಲ್ ವೈಪರ್ ಮತ್ತು ವಿಷರಹಿತ ಇಲಿ, ಇಂಡಿಯನ್ ರಾಕ್ ಪೈಥಾನ್ ಮತ್ತು ರೆಡ್ ಸ್ಯಾಂಡ್ ಬೋವಾ ಇದ್ದವು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.

ಪ್ರಪಂಚದಾದ್ಯಂತ 3,000ಪ್ರಭೇದಗಳ ಹಾವುಗಳಲ್ಲಿ ಸುಮಾರು 20 ಪ್ರತಿಶತ ಹಾವುಗಳು ವಿಷಕಾರಿ ಹಾವುಗಳು ಇದ್ದು, ಇದರಲ್ಲಿ ಭಾರತೀಯ ಉಪಖಂಡದಲ್ಲಿಯೇ ನಾಲ್ಕು ವಿಷಕಾರಿಪ್ರಭೇದದ ಹಾವುಗಳನ್ನು ಕಾಣಬಹುದಾಗಿದೆ. ಇದರಲ್ಲಿ ಕೋಬ್ರಾ, ರಸ್ಸೆಲ್ ವೈಪರ್, ಸಾ-ಸ್ಕೇಲ್ಡ್ ವೈಪರ್ ಮತ್ತು ಕಾಮನ್ ಕ್ರೈಟ್ ಆಗಿವೆ.
ಹಾವುಗಳು ಪರಿಸರ ವ್ಯವಸ್ಥೆಯಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಏಕೆಂದರೆ ಅವು ಆಹಾರದಲ್ಲಿ ಭಕ್ಷಕ ಮತ್ತು ಪರಭಕ್ಷಕಗಳಾಗಿವೆ. ಸಣ್ಣ ಸಸ್ತನಿಗಳು ಮತ್ತು ಪಕ್ಷಿಗಳನ್ನು ತಿಂದು ಹಾವುಗಳು ಬದುಕುತ್ತವೆ ಮತ್ತು ಇವುಗಳನ್ನು ಹದ್ದುಗಳು ಮತ್ತು ಇತರೆ ಪಕ್ಷಿಗಳು ಬೇಟೆಯಾಡಿ ತಿನ್ನುತ್ತವೆ, ಆದ್ದರಿಂದ ಹಾವುಗಳು ತುಂಬಾ ಪ್ರಮುಖ ಪಾತ್ರವನ್ನು ಪರಿಸರದ ವ್ಯವಸ್ಥೆಯಲ್ಲಿ ವಹಿಸುತ್ತವೆ ಎಂದರೆ ತಪ್ಪಾಗಲಾರದು ಎಂದುಕಾರ್ಯನಿರ್ವಾಹಕ ನಿರ್ದೇಶಕ ವಿಪಿನ್ ಸಿಂಗ್ಈ ಸಂದರ್ಭದಲ್ಲಿ ಹೇಳಿದರು.
ಮೃಗಾಲಯವು ವಾರಾಂತ್ಯದಲ್ಲಿ ರೆಪ್ಟೈಲ್ ಪಾರ್ಕ್ ಮಾರ್ಗದರ್ಶಿ ಪ್ರವಾಸವನ್ನು ತನ್ನ ಕೀಪರ್ ಮತ್ತು ಜೀವಶಾಸ್ತ್ರಜ್ಞ ತಜ್ಞರೊಂದಿಗೆ ಸಂವಹನ ನಡೆಸಿ ಅನೇಕ ತರಹದ ಹಾವಿನಪ್ರಭೇದಗಳ ಬಗ್ಗೆ ತಿಳಿದುಕೊಳ್ಳಲು ಸಹ ಆಯೋಜಿಸಿದ್ದರು.ಮೃಗಾಲಯವು ಇದರ ಜೊತೆಗೆ ಜುಲೈ 17 ಮತ್ತು 18 ರಂದು ತನ್ನ ಬಟರ್ಫ್ಲೈ ಪಾರ್ಕ್ನ ಮಾರ್ಗದರ್ಶಿ ಪ್ರವಾಸವನ್ನು ಸಹ ಹಮ್ಮಿಕೊಂಡಿತ್ತು ಮತ್ತು ಈ ಪ್ರವಾಸದಲ್ಲಿ ಕೀಟಶಾಸ್ತ್ರಜ್ಞರೊಂದಿಗೆ ಜನರು ಸಂವಹನ ನಡೆಸಲು ಅವಕಾಶವನ್ನು ಸಹ ಒದಗಿಸಲಾಗಿತ್ತು.
ಇದಲ್ಲದೆ ಮೃಗಾಲಯದಲ್ಲಿ ಪ್ರದರ್ಶನಕ್ಕಿಡಲಾಗಿರುವ ಚೇಳು, ಇದು 20 ಮರಿ ಚೇಳುಗಳಿಗೆ ಜನ್ಮ ನೀಡಿತ್ತು. ಮರಿ ಚೇಳುಗಳು ತನ್ನ ತಾಯಿಯ ಬೆನ್ನಿನ ಮೇಲೆ ಹತ್ತಿ ಮತ್ತು ಆಕೆಯ ದೇಹದಿಂದ ಪೋಷಕಾಂಶಗಳು ಮತ್ತು ಆಹಾರವನ್ನು ಹೀರುವುದನ್ನು ಮೃಗಾಲಯದಲ್ಲಿ ಕಾಣಬಹುದಾಗಿತ್ತು

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments