Webdunia - Bharat's app for daily news and videos

Install App

ಮಕ್ಕಳಿಗೆ “ಚಿಣ್ಣರ ಧಾಮ” ನಿರ್ಮಿಸುತ್ತಿರುವ ಬೆಂಗಳೂರು ವಿಮಾನ ನಿಲ್ದಾಣ ಫೌಂಡೇಷನ್!

Webdunia
ಶುಕ್ರವಾರ, 22 ಅಕ್ಟೋಬರ್ 2021 (18:31 IST)
ಬೆಂಗಳೂರು: ಕೋವಿಡ್ ಸಂಕ್ರಮಿಕದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಫೆರ್ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಮತ್ತು ಸ್ಪರ್ಶ ಟ್ರಸ್ಟ್ ನಿಂದ "ಚಿಣ್ಣರ ಧಾಮ" ನಿರ್ಮಾಣ ಮಾಡಲಾಗುತ್ತಿದೆ. 
 
ಕಳೆದೆರಡು ವರ್ಷಗಳಿಂದ ಕೋವಿಡ್ -19 ದಾಳಿಯಿಂದಾಗಿ ಲಕ್ಷಾಂತರ ಮಕ್ಕಳು ಪೋಷಣೆ ಕಳೆದುಕೊಂಡಿದ್ದಾರೆ. ರಾಜ್ಯದಲ್ಲೂ ಕೂಡ ಇಬ್ಬರೂ ಸಮಸ್ಯೆ ಅಥವಾ ಒಬ್ಬ ಪೋಷಕರನ್ನು ಕಳೆದುಕೊಂಡ ಮಕ್ಕಳು ಸಂಕಷ್ಟದಲ್ಲಿದ್ದಾರೆ. ಮತ್ತೆ ಮಕ್ಕಳ ಭವಿಷ್ಯವೀಗ ಆತಂಕದಲ್ಲಿದ್ದು, ಹಣಕಾಸು ನೆರವು, ಮಾನಸಿಕ ಸ್ಥೈರ್ಯ ಈ ಮಕ್ಕಳಿಗೆ ಬೇಕಾಗಿದೆ.
 
ಈ ದೃಷ್ಟಿಯಿಂದ ರಾಜ್ಯ ವಿವಿಧ ಜಿಲ್ಲೆಗಳಿಂದ ಆಯ್ದ 300 ಹೆಣ್ಣುಮಕ್ಕಳಿಗೆ 12ನೇ ತರಗತಿವರೆಗೆ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ತರಬೇತಿಯನ್ನು ನೀಡಲು ‘ಚಿಣ್ಣರ ಧಾಮ' ಎಂಬ ಸುಸಜ್ಜಿತ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ.  ಈ ಧಾಮದಲ್ಲಿ ವಸತಿ, ಕಲಿಕೆಗೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. 
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ (ಬಿಐಎಎಲ್) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ವಿಭಾಗವಾದ ಕೆಐಎಎಫ್ ಈ ಧಾಮ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ.  
ಕೆಐಎಫ್‌ನ ಮಹತ್ವಾಕಾಂಕ್ಷಿ ಮತ್ತು ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ 'ನಮ್ಮ ಶಿಕ್ಷಣ ' ಅಡಿಯಲ್ಲಿ ಚಿಣ್ಣರ ಧಾಮವನ್ನು ನಿರ್ವಹಿಸಲಾಗುತ್ತಿದೆ.
 
ಈ ಬಗ್ಗೆ ವಿವರಿಸಿರುವ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಅವರು, " ಎಷ್ಟೋ ಮಕ್ಕಳ ಜೀವನ ಕೊರೊನಾ ಸಾಂಕ್ರಮಿಕದಿಂದ ಅತಂತ್ರವಾಗಿದೆ. ಅವರಿಗೆ ನೆರವಾಗುವ ದೃಷ್ಟಿಯಿಂದ ಚಿಣ್ಣರ ಧಾಮ ನಿರ್ಮಿಸುತ್ತಿದ್ದೇವೆ. 
ಬೆಂಗಳೂರು ಏರ್‌ಪೋರ್ಟ್ ಬಳಿಯ ಬೆಟ್ಟಕೋಟೆ ಎಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಏಕೈಕ ಪ್ರದೇಶದ ಚಿಣ್ಣರ ಧಾಮ ನಿರ್ಮಾಣವಾಗಲಿದೆ. ಇದರ ನಿರ್ವಹಣೆಯನ್ನು ಕಾರ್ಪೋರೇಟ್ ಮೂಲಕ, ಮಾಜಿ ಸೇನಾಧಿಕಾರಿಗಳು, ಸಮಾಜಸೇವಕರ ತಂಡವೊಂದು ವಹಿಸಿಕೊಳ್ಳಲಿದೆ. 46,000 ಚ.ಅಡಿಗಳಲ್ಲಿ ನಿರ್ಮಾಣವಾಗುತ್ತಿರುವ ಈ ಧಾಮವು ಮೊದಲ ಹಂತದ ನಿರ್ಮಾಣ ಕಾಮಗಾರಿ 2021 ರ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳ್ಳುತ್ತಿದೆ. ಶಿಕ್ಷಣ ಕೇಂದ್ರ, ಆರೋಗ್ಯ ಸೇವೆಗಳು, ಕೌಶಲ ಅಭಿವೃದ್ಧಿ ತರಬೇತಿಗೆ ಅಗತ್ಯ ಮೂಲಸೌಕರ್ಯವನ್ನು ಈ ಧಾಮದಲ್ಲಿ ಒದಗಿಸಲಾಗಿದೆ.
 
ವೀಕ್ಷಕ ಟ್ರಸ್ಟ್ ನಂತರ ಆಡಳಿತ ಮಂಡಳಿ ಸದಸ್ಯರಾದ ಜಿ. ರಾಘವನ್ ಮಾತನಾಡುತ್ತಾ, ತಮ್ಮ ಮಕ್ಕಳ ಜೀವನವನ್ನು ಉಜ್ವಲವಾಗಿ ರೂಪಿಸಬೇಕು ಎಂದು ಕನಸು ಕಟ್ಟಿದ ಸಂದರ್ಭದಲ್ಲಿ ಕನಸನ್ನು ನನಸು ಮಾಡಲು ನಮ್ಮ ಸಂಸ್ಥೆ ನೆರವಾಗುತ್ತಿದೆ.
ವಿಮಾನ ನಿಲ್ದಾಣ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments