Select Your Language

Notifications

webdunia
webdunia
webdunia
webdunia

ಆಟೋ ಚಾಲಕರ ಸಂಘಟನೆ ಮಾರ್ಚ್ 20 ರಂದು ಪ್ರತಿಭಟನೆಗೆ ಕರೆ

The auto drivers' organization has called for a protest on March 20
bangalore , ಶುಕ್ರವಾರ, 17 ಮಾರ್ಚ್ 2023 (14:41 IST)
ನಗರದಲ್ಲಿ ಅಕ್ರಮ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಒತ್ತಾಯಿಸಿ ಆಟೋ ಚಾಲಕರ ಸಂಘಟನೆಗಳು ಮಾರ್ಚ್ 20 ರಂದು ಪ್ರತಿಭಟನೆಗೆ ಕರೆ ನೀಡಿದೆ. ನಗರದಲ್ಲಿ ಅಕ್ರಮ ಬೈಕ್ ಟ್ಯಾಕ್ಸಿಗಳ ಓಡಾಟಕ್ಕೆ ಸಾರಿಗೆ ಇಲಾಖೆ ಅನುಮತಿ ನೀಡಿದ್ದು,ಆಟೋರಿಕ್ಷಾ ಚಾಲಕರ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿದೆ. ಸಾರಿಗೆ ಸಚಿವರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ" ಅಂತ ಆಟೋ ಚಾಲಕರು ಮಾರ್ಚ್ 20 ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ, "ಬೈಕ್ ಟ್ಯಾಕ್ಸಿಗಳನ್ನು ಓಡಿಸಲು ಅಗ್ರಿಗೇಟರ್ಗಳಿಗೆ ನೀಡಿರುವ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ಎಂದು ಇಂದಿನಿಂದ ಮೂರು ದಿನ  ಆಟೋರಿಕ್ಷಾಗಳಿಗೆ ಕಪ್ಪು ಬಾವುಟಗಳನ್ನು ಕಟ್ಟಿ ಶಾಂತಿಯುತ ಪ್ರತಿಭಟನೆಯನ್ನು ಆಟೋಚಾಲಕರು ಮುಂದುವರೆಸಿದ್ದಾರೆ, ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡುತ್ತಿದ್ದೇವೆ. ಇದಕ್ಕು ಸರ್ಕಾರ ಮಣಿಯದೇ ಇದ್ದಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯವರೆಗೆ ಮುಷ್ಕರ ನಡೆಸುತ್ತೇವೆ ಎಂದು ಆಟೋಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಯಾಣ ಕರ್ನಾಟಕ ಭಾಗಕ್ಕೆ ಭಾರತ ಸಂವಿಧಾನದ ಆರ್ಟಿಕಲ್ 371(ಎ) ಗೆ ತಿದ್ದುಪಡಿ