Publish Date: Thu, 22 Nov 2018 (18:57 IST)
Updated Date: Thu, 22 Nov 2018 (18:59 IST)
ನಿರ್ಜನ ಪ್ರದೇಶದಲ್ಲಿ ಓಡಾಡುವಂತಹ ವಾಹನ ಸವಾರರನ್ನು ಅಡ್ಡಗಟ್ಟಿ ಕಾರದಪುಡಿ, ಪಿಸ್ತೂಲ್, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾರಕಾಸ್ತ್ರ ಬಳಸಿ ದರೋಡೆ ಮಾಡುತ್ತಿದ್ದಂತಹ ಗ್ಯಾಂಗ್ ನ್ನು ಬಂಧಿಸುವಲ್ಲಿ ವೈಟ್ ಫೀಲ್ಡ್ ವಿಭಾಗದ ವಿಶೇಷ ಅಪರಾಧ ತಂಡ ಯಶಸ್ವಿಯಾಗಿದೆ. ಗ್ಯಾಂಗ್ ನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮಂಜುನಾಥ್ ನಗರದ ಶಿವರಾಜ್ , ಚನ್ನಕೇಶವ ನಗರದ ಶಿವಶಂಕರ, ವಸಂತನಗರದ ಸಂತೋಷ್ , ಕಾಡುಬೀಸನಹಳ್ಳಿಯ ದೇವರಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ವರ್ತೂರಿನ ವೆಂಕಟೇಶ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಬಂಧಿತ ಆರೋಪಿಗಳಿಂದ ಸ್ಕೊಡಾ ಕಾರು , ಮೂರು ಜೀವಂತ ಗುಂಡುಗಳು, ಪಿಸ್ತೂಲ್, ಎರಡು ಡ್ರಾಗರ್, ದರೋಡೆಗೆ ಬಳಸುತ್ತಿದ್ದ ಕಾರದ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ.