Webdunia - Bharat's app for daily news and videos

Install App

ಅಪಘಾತದ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Webdunia
ಮಂಗಳವಾರ, 28 ಸೆಪ್ಟಂಬರ್ 2021 (19:54 IST)
ಅಪಘಾತದ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಒಂಬತ್ತು ವರ್ಷಗಳ ಬಳಿಕ ಪತ್ತೆಹಚ್ಚಿ ಬ್ಯಾಟರಾಯನಪುರ ಸಂಚಾರಿ ಪೆÇಲೀಸರು ಬಂಧಿಸಿದ್ದಾರೆ. 
ಅಪಘಾತ ಪ್ರಕರಣದಲ್ಲಿ ಆಂಥೋನಿ ರಾಜ್? (44) ಬಂಧಿತ ಆರೋಪಿ. ಬ್ಯಾಟರಾಯನಪುರ ಸಂಚಾರ ಪೆÇಲೀಸ್ ಠಾಣೆ ವ್ಯಾಪ್ತಿಯ ಬಾಪೂಜಿ ನಗರ ಐದನೇ ಮುಖ್ಯರಸ್ತೆಯಲ್ಲಿಟ್ರ್ಯಾಕ್ಟರ್  ಚಾಲಕನಾಗಿದ್ದ ಈತ ಹತ್ತು ವರ್ಷಗಳ ಹಿಂದೆ ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಆಟೋ ಚಾಳಕ ಕೌಸಲ್ ಕುಮಾರ್(8) ಎಂಬಾತ ಟ್ರ್ಯಾಕ್ಟರ್ ಚಕ್ರಕ್ಕೆ  ಸಿಲುಕಿ ಮೃತಪಟ್ಟಿದ್ದ. 
ಈ ಅಪಘಾತ ಪ್ರಕರಣದಲ್ಲಿ ಆಂಥೋನಿಗೆ 2012ರಲ್ಲಿ 10 ತಿಂಗಳು 15 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶವಾಗಿತ್ತು. ಆದರೆ, ಆಂಥೋನಿ ತಲೆಮರೆಸಿಕೊಂಡಿದ್ದ. ಮದ್ಯವ್ಯಸನಿಯಾಗಿದ್ದ ಆಂಥೋನಿ ತನ್ನ ವಿಳಾಸ ಬದಲಿಸಿಕೊಂಡು ರಿಹ್ಯಾಬಿಲಿಟೇಷನ್? ಸೆಂಟರ್‍ವೊಂದಕ್ಕೆ ಸೇರಿಕೊಂಡಿದ್ದ. ಮತ್ತೊಂದೆಡೆ ಆರೋಪಿಗಾಗಿ ವರ್ಷಗಟ್ಟಲೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. 
ಪತ್ತೆಕಾರ್ಯ ಕೈಬಿಡದ ಪೆÇಲೀಸರು ಆಂಥೋನಿ ಸಹೋದರರ ಬಳಿ ಮಾಹಿತಿ ಕಲೆ ಹಾಕಿ, ಸೋಮನಹಳ್ಳಿಯ ಸೇಂಟ್ ಮದರ್ ತೆರೆಸಾ ರಿಹ್ಯಾಬ್? ಸೆಂಟರ್?ನಲ್ಲಿ ಆಂಥೋನಿ ಇರುವ ಕುರಿತು ವಿವರ ಪಡೆದಿದ್ದರು. ಪುಟ್ಟಮಲ್ಲಯ್ಯ ಎಂಬ ಪೇದೆಯನ್ನು ಮದ್ಯವ್ಯಸನಿ ಎಂದು ಬಿಂಬಿಸಿ ಕಾರ್ಯಾಚರಣೆ ನಡೆಸಿದ ಪೆÇಲೀಸರು, ಅವರನ್ನು ರಿಹ್ಯಾಬಿಲಿಟೇಷನ್ ಸೆಂಟರ್‍ಗೆ ಸೇರಿಸುವ ನೆಪದಲ್ಲಿ ಅಲ್ಲಿಗೆ ತೆರಳಿ ಆಂಥೋನಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೆÇಲೀಸರು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments